ಚುನಾವಣಾ ಅಖಾಡಕ್ಕೆ ಇನ್ಸ್’ಪೆಕ್ಟರ್ ಎಂಟ್ರಿ — ಜೆಡಿಎಸ್ ನಿಂದ ಸ್ಪರ್ಧೆ..!?
ಚಾಮರಾಜನಗರ: ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಜನಮನ್ನಣೆ ಗಳಿಸಿದ್ದ ಬಿ.ಪುಟ್ಟಸ್ವಾಮಿ ತಮ್ಮ ನೌಕರಿಗೆ ರಾಜೀನಾಮೆ ಕೊಟ್ಟಿದ್ದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ಅಖಾಡ ರೆಡಿ ಮಾಡಿಕೊಂಡಿದ್ದಾರೆ.
ಮೈಸೂರಿನ ಐಜಿಪಿ ಕಚೇರಿಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನ ವಿಭಾಗದಲ್ಲಿ ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಪುಟ್ಟಸ್ವಾಮಿ ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿದ್ದು ಸಂಕ್ರಾಂತಿ ನಂತರ ಅಧಿಕೃತವಾಗಿ ರಾಜಕೀಯಕ್ಕೆ ಧುಮುಕಲಿರುವ ಮಾತುಗಳು ಕೇಳಿಬಂದಿದೆ.
ಮೈಸೂರು ನಗರದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ವೃತ್ತಿ ಆರಂಭಿಸಿ ಬಳಿಕ ಪಿಎಸ್ಐ ಹುದ್ದೆಗೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಾಮಾಪುರ, ಕೊಳ್ಳೇಗಾಲ, ಚಾಮರಾಜನಗರದಲ್ಲಿ ಪಿಎಸ್ಐ, ಪಿಐ ಆಗಿ ಕರ್ತವ್ಯ ನಿರ್ವಹಿಸಿದ್ದು ಜನಸ್ನೇಹಿ ಆಡಳಿತದಿಂದ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಕ್ರಮ ಮದ್ಯ ಮಾರಾಟದ ವಿರುದ್ಧ ತೆಗೆದುಕೊಂಡ ಕಠಿಣ ಕ್ರಮಗಳಿಂದ ಮಹಿಳಾ ಅಭಿಮಾನಿಗಳ ಬಳಗವು ಇವರಿಗೆ ತುಸು ಹೆಚ್ಚಿದ್ದು ಚುನಾವಣೆಯಲ್ಲಿ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆ ಇದೆ.
ಅಭ್ಯರ್ಥಿಗಳ ಹೆಸರು ಬಹಿರಂಗ:
ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರ ವೀಡಿಯೋವೊಂದು ಲಭ್ಯವಾಗಿದ್ದು ಚಾಮರಾಜನಗರ ಜಿಲ್ಲೆಯ ಅಭ್ಯರ್ಥಿಗಳ ಹೆಸರು ಕ್ಲಿಯರ್ ಆಗಿದೆ, ಕೆಲಸ ಮಾಡಿ ಹೋಗಿ ಎಂದು ಹೇಳಿದ್ದಾರೆ.
ಹನೂರಿಗೆ ಎಂ.ಆರ್.ಮಂಜುನಾಥ್, ಚಾಮರಾಜನಗರಕ್ಕೆ ಮುಸ್ಲಿಂ ಕೋಟದಡಿ ಜೆಡಿಎಸ್ ಮಾಧ್ಯಮ ವಕ್ತಾರ ಸಯ್ಯದ್ ಅಕ್ರಮ್, ಲಿಂಗಾಯತ ಕೋಟದಡಿ ಗುಂಡ್ಲುಪೇಟೆ ಕ್ಷೇತ್ರದಿಂದ ಕಡುಬೂರು ಮಂಜುನಾಥ್ ಹಾಗೂ ಕೊಳ್ಳೇಗಾಲಕ್ಕೆ ಪುಟ್ಟಸ್ವಾಮಿ ಎಂದು ಸಾರಾ ಮಹೇಶ್ ಹೇಳಿದ್ದಾರೆ.
ಎಲ್ಲಾ ಕ್ಲಿಯರ್ ಆಗಿದೆ, ಅಣ್ಣಾ ಹೇಳಿದ್ದಾರೆ ಕೆಲಸ ಮಾಡಿ ಹೋಗೆಂದು ಹನೂರು ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಗೆ ಸಾರಾ ಮುಖಂಡರ ನಡುವೆಯೇ ಹೇಳಿರುವುದು ವೀಡಿಯೋದಲ್ಲಿದೆ.
ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದ್ದು ಜೆಡಿಎಸ್ ರಣಕಣ ಸಿದ್ಧಪಡಿಸಿದ್ದು ಚುನಾವಣೆ ರಂಗು ಜೋರಾಗಿದೆ. ಇನ್ಸ್‌ಪೆಕ್ಟರ್ ಪುಟ್ಟಸ್ವಾಮಿ ಅವರಿಗೂ ಅಭಿಮಾನಿ ಪಡೆಯೇ ಇದ್ದು ಕೊಳ್ಳೇಗಾಲದಲ್ಲಿ ಕಾದಾಟ ಜೋರಾಗುವ ಸಾಧ್ಯತೆ ಇದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw