ಶಾಲಾ ಬಸ್ ನ ಚಕ್ರಕ್ಕೆ ಸಿಲುಕಿ 6 ವರ್ಷದ ಬಾಲಕಿಯ ದಾರುಣ ಸಾವು
ರಾಮನಗರ: ಶಾಲಾ ಬಸ್ ನ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿನಿಯೋರ್ವಳು ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಪಿಚ್ಚನಕೆರೆ ಬಳಿ ನಡೆದಿದೆ.
ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಯುಕೆಜಿಯಲ್ಲಿ ಓದುತ್ತಿದ್ದ ರಕ್ಷಿತಾ(6) ಮೃತಪಟ್ಟ ಬಾಲಕಿಯಾಗಿದ್ದಾಳೆ. ಬಸ್ ನ ಬಾಗಿಲ ಬಳಿಯ ಸೀಟಿನಲ್ಲಿ ವಿದ್ಯಾರ್ಥಿನಿ ಕುಳಿತಿದ್ದು, ಚಾಲಕ ಬ್ರೇಕ್ ಹಾಕಿದ ವೇಳೆ ಸೀಟಿನಿಂದ ವಿದ್ಯಾರ್ಥಿನಿ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದು, ಈ ವೇಳೆ ಬಸ್ ಬಾಲಕಿಯ ಮೇಲೆಯೇ ಹರಿದಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಶಾಲಾ ಬಸ್ ನ ಬಾಗಿಲು ಹಾಕಿರಲಿಲ್ಲ ಹೀಗಾಗಿ ಬಸ್ ನಿಂದ ಎಸೆಯಲ್ಪಟ್ಟ ಬಾಲಕಿ ನೇರವಾಗಿ ರಸ್ತೆಗೆ ಬಿದ್ದಿದ್ದಾಳೆ ಎಂದು ಹೇಳಲಾಗಿದೆ. ಘಟನೆಯ ವೇಳೆ ಬಸ್ ನ ಚಾಲಕ ಹಾಗೂ ಆಯಾ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw