ಮಗುವನ್ನು ಕಳೆದುಕೊಂಡಿದ್ದಲ್ಲಿ ಪೊಲೀಸರನ್ನು ಸಂಪರ್ಕಿಸಿ: ಒಂಟಿಯಾಗಿದ್ದ ಮಗುವಿನ ರಕ್ಷಣೆ

ಮಂಗಳೂರು: 3–4 ವರ್ಷ ಪ್ರಾಯದ ಹೆಣ್ಣು ಮಗುವೊಂದು ಪತ್ತೆಯಾದ ಘಟನೆ ಮಂಗಳೂರು ನಗರದ ಸುರತ್ಕಲ್ ಠಾಣಾ ವ್ಯಾಪ್ತಿಯ ಸುರತ್ಕಲ್ ಸದಾನಂದ ಹೋಟೆಲ್ ಬಳಿ ನಡೆದಿದೆ.
ಒಂಟಿಯಾಗಿದ್ದ ಮಗುವನ್ನು ಗಮನಿಸಿದ ಸಾರ್ವಜನಿಕರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ.
ಇನ್ನೂ ಮಗುವನ್ನು ಪೋಷಕರಿಗೆ ಒಪ್ಪಿಸಲು ಪೊಲೀಸರು ಕ್ರಮಕೈಗೊಂಡಿದ್ದು, ಯಾರಾದರೂ ಮಗುವನ್ನು ಕಳೆದುಕೊಂಡಿದ್ದಲ್ಲಿ ಸುರತ್ಕಲ್ ಠಾಣಾ ಫೋನ್ ದೂ.ಸಂ.- 0824-2220540, ಪೊಲೀಸ್ ನಿರೀಕ್ಷಕರ ಮೊ.ಸಂ.- 9480805360, ಪೊಲೀಸ್ ಉಪನಿರೀಕ್ಷಕ- 9480802344, ನಗರ ನಿಸ್ತಂತು ನಿಯಂತ್ರಣ ಕೊಠಡಿ ಮೊ. 9480802321 ಅಥವಾ ಮಹಿಳಾ ಸಮನ್ವಯ ಅಧಿಕಾರಿ ಮೊ.: 9448332713ನ್ನು ಸಂಪರ್ಕಿಸುವಂತೆ ಸುರತ್ಕಲ್ ಠಾಣೆಯ ಪ್ರಕಟನೆ ತಿಳಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw