ಸ್ಯಾಂಟ್ರೋ ರವಿ ಎಲ್ಲಿ ಇದ್ದರೂ ಬಿಡಲ್ಲ ಅರೆಸ್ಟ್ ಮಾಡ್ತೀವಿ: ಸಚಿವ ಅರಗ ಜ್ಞಾನೇಂದ್ರ
ಸ್ಯಾಂಟ್ರೋ ರವಿ ಶೀಘ್ರ ಬಂಧನವಾಗುತ್ತದೆ. ಒಂದೆರಡು ದಿನಗಳಲ್ಲಿ ಆತನನ್ನು ಅರೆಸ್ಟ್ ಮಾಡಲಾಗುತ್ತದೆ. ಆತ ಯಾವ ಬಿಲದಲ್ಲಿ ಹೊಕ್ಕಿದ್ದರು ಬಿಡೋದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಸ್ಯಾಂಟ್ರೋ ರವಿ ಬಂಧನ ವಿಳಂಬ ವಿಚಾರದ ಕುರಿತ ಮಾಧ್ಯಮದವರ ಪ್ರಶ್ನೆಗೆ ಉಡುಪಿಯಲ್ಲಿಂದು ಉತ್ತರಿಸಿದ ಅವರು, ಸ್ಯಾಂಟ್ರೋ ರವಿ ನನ್ನ ಜೊತೆ ಆತ ಫೋಟೋ ತೆಗೆಸಿಕೊಂಡಿರಬಹುದು. ನೂರಾರು ಜನ ಬರುತ್ತಾರೆ, ಫೋಟೋ ತೆಗೆಸಿಕೊಳ್ಳುತ್ತಾರೆ. ಫೋಟೋ ತೆಗೆಸಿಕೊಳ್ಳುವವರಿಗೆ ಬೇಡ ಎನ್ನಲಾಗುವುದಿಲ್ಲ. ನಮ್ಮದು ಒಂಥರಾ ಸಿನಿಮಾ ನಟರ ಗ್ರೇಡ್ ಆಗಿದೆ. ಜನ ಪ್ರೀತಿಯಿಂದ ಹತ್ತಿರ ಬಂದು ಫೋಟೋ ತೆಗೆಸಿಕೊಳ್ಳುತ್ತಾರೆ. ಈಗಲೂ ಕೂಡ ಸ್ಯಾಂಟ್ರೋ ರವಿ ಎದುರು ಬಂದು ನಿಂತರೆ ನನಗೆ ಗುರುತ ಆಗಲ್ಲ ಎಂದರು.
ಆತ ಎಲ್ಲಿ ಇದ್ದರೂ ಬಿಡಲ್ಲ. ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದಾರೆ. ಇರೋದ್ರಲ್ಲಿ ಆತ ಸ್ವಲ್ಪ ಬುದ್ಧಿವಂತ. ಹಾಗಾಗಿ ಪದೇ ಪದೇ ಸ್ಥಳ ಬದಲಾಯಿಸುತ್ತಿರುತ್ತಾನೆ. ಆತ ಇಪ್ಪತ್ತು ವರ್ಷದಿಂದ ಈ ಕೆಲಸ ಮಾಡುತ್ತಿದ್ದಾನೆ. ಮೈಸೂರಲ್ಲಿ ಆತನ ವಿರುದ್ಧ ರೌಡಿ ಲಿಸ್ಟ್ ಇದೆ. ಆತನ ವಿರುದ್ಧ ಗೂಂಡಾ ಆಕ್ಟ್ ಕೂಡ ಹಾಕಿದ್ದರು. ಯಾರ ಯಾರ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ ಏನು ವ್ಯವಹಾರ ಅವ ಬಾಯಿ ಬಿಟ್ಟ ನಂತರ ಗೊತ್ತಾಗುತ್ತದೆ. ಆತನ ಬಗ್ಗೆ ಸುಳಿವು ಸಿಗುತ್ತಿದೆ. ಶೀಘ್ರ ಬಂಧನ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ನನಗೆ ಹೆಣ್ಣಾಗಿ ಬದುಕಲು ಇಷ್ಟ, ನನ್ನನ್ನು ಬದುಕಲು ಬಿಡಿ: ನಿಝಾಮ್ ಮನವಿ
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw