ಕೊನೆಗೂ ಸ್ಯಾಂಟ್ರೋ ರವಿಯ ಬಂಧನ: ಗುಜರಾತ್ ನಲ್ಲಿ ಸಿಕ್ಕಿ ಬಿದ್ದ ಸ್ಯಾಂಟ್ರೋ ರವಿ
![santro ravi](https://www.mahanayaka.in/wp-content/uploads/2023/01/santro-ravi-1.jpg)
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ಸ್ಯಾಂಟ್ರೋ ರವಿ ಇದೀಗ ಗುಜರಾತ್ ನಲ್ಲಿ ಕರ್ನಾಟಕದ ಪೊಲೀಸರ ಬಲೆಗೆ ಬಿದ್ದಿದ್ದು, ಕೆ.ಎಸ್.ಮಂಜುನಾಥ್ ಯಾನೆ ಸ್ಯಾಂಟ್ರೋ ರವಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಯಾಂಟ್ರೋ ರವಿ ಬಂಧನಕ್ಕೆ ನಾಲ್ವರು ಎಸ್ ಪಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು. ರಾಮನಗರ, ಮಂಡ್ಯ, ಮೈಸೂರು ಹಾಗೂ ಕೇರಳದಲ್ಲಿ ಕಾರ್ಯಾಚರಣೆ ಮಾಡಲಾಗಿತ್ತು. ಈ ನಡುವೆ ಸ್ಯಾಂಟ್ರೋ ರವಿ ಗುಜರಾತ್ ನಲ್ಲಿರುವ ಸುಳಿವು ಪೊಲೀಸರಿಗೆ ಲಭ್ಯವಾಗಿದ್ದು, ರಾಜ್ಯ ಪೊಲೀಸರ ತಂಡ ಗುಜರಾತ್ ನಲ್ಲಿ ಸ್ಯಾಂಟ್ರೋ ರವಿಯನ್ನು ಬಂಧಿಸಿ ಬೆಂಗಳೂರಿಗೆ ಕರೆತರುತ್ತಿದ್ದಾರೆ ಎಂದು ವರದಿಯಾಗಿದೆ.
ಸ್ಯಾಂಟ್ರೋ ರವಿ ವೇಶ್ಯಾವಾಟಿಕೆಯ ಕಿಂಗ್ ಪಿನ್ ಆಗಿದ್ದ, ಇದರ ಜೊತೆಗೆ ಪೊಲೀಸರ ಇಲಾಖೆಯ ವರ್ಗಾವಣೆ ದಂಧೆಗೂ ಕೈಜೋಡಿಸಿದ್ದ. ರಾಜ್ಯ ಸರ್ಕಾರದ ಹಲವು ಸಚಿವರ ಜೊತೆಗೆ ಈತನಿಗೆ ನಂಟಿದ್ದು, ಈ ಸಂಬಂಧ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw