ಯತ್ನಾಳ್ ಯಾರಿಗೋ ಹುಟ್ಟಿದವ ಎಂದ ಮುರುಗೇಶ್ ನಿರಾಣಿ: ಬಿಜೆಪಿ ನಾಯಕರ ನಡುವೆ ಜಟಾಪಟಿ
ರಾಜ್ಯದಲ್ಲಿ ಮೀಸಲಾತಿ ಕದನಕ್ಕೆ ಸರ್ಕಾರ ಕಂಗಾಲಾಗಿದೆ. ಇನ್ನೊಂದೆಡೆ ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡುತ್ತಿರುವ ಹೇಳಿಕೆ ಸಿಎಂ ಬೊಮ್ಮಯಿ ಸೇರಿದಂತೆ ಸ್ವಪಕ್ಷೀಯರದ್ದೇ ನೆಮ್ಮದಿ ಕೆಡಿಸಿದೆ.
ನಿನ್ನೆಯಷ್ಟೇ ಮುರುಗೇಶ್ ನಿರಾಣಿಯನ್ನು ಪಿಂಪ್ ಎಂದು ಯತ್ನಾಳ್ ಕರೆದಿದ್ದು, ಇದೀಗ ಯತ್ನಾಳ್ ಗೆ ಮುರುಗೇಶ್ ನಿರಾಣಿ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ಬಿಜಾಪುರದವನೊಬ್ಬ ಇದ್ದಾನೆ, ಎಲುಬಿಲ್ಲದ ನಾಲಿಗೆ. ಅವರ ಅಪ್ಪನಿಗೆ ಹುಟ್ಟಿದ್ದರೆ ಈ ಥರದ ಮಾತು ಆಡುತ್ತಿರಲಿಲ್ಲ ಎಂದು ಯತ್ನಾಳ್ ವಿರುದ್ಧ ಮುರುಗೇಶ್ ನಿರಾಣಿ ಏಕವಚನದಲ್ಲೇ ಅವಾಚ್ಯವಾಗಿ ವಾಗ್ದಾಳಿ ನಡೆಸಿದ್ದಾರೆ.
ದೀಪ ಆರುವಾಗ ಜೋರಾಗಿ ಉರಿಯುತ್ತದೆ. ಭಾರತೀಯ ಜನತಾ ಪಾರ್ಟಿ ನಮಗೆ ಒಂದು ಸಂಸ್ಕೃತಿಯನ್ನು ಕಲಿಸಿಕೊಟ್ಟಿದೆ. ಸುಸಂಸ್ಕೃತ ಕುಟುಂಬದಿಂದ ಬಂದಿರುವವರು ಹೀಗೆ ಮಾತನಾಡಲು ಸಾಧ್ಯವಿಲ್ಲ. ಯಾರಿಗೋ ಹುಟ್ಟಿದವರು ಈ ರೀತಿ ಮಾತನಾಡಲು ಸಾಧ್ಯ ಎಂದು ತಿರುಗೇಟು ನೀಡಿದರು.
ಇನ್ನು ಮುಂದೆ ಯತ್ನಾಳ್ ಈ ರೀತಿಯ ಹೇಳಿಕೆ ನೀಡಿದರೆ ನಾಲಿಗೆ ಕತ್ತರಿಸುವ ಪ್ರಸಂಗ ಬರುವ ದಿನಗಳಲ್ಲಿ ಬರುತ್ತದೆ ಎಂದು ಯತ್ನಾಳ್ ಗೆ ಮುರುಗೇಶ್ ನಿರಾಣಿ ಎಚ್ಚರಿಕೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw