RIP Logic: ಜನರ ಕಿವಿಗೆ ಹೂವಿಟ್ಟ ಬಾಹುಬಲಿ ನಿರ್ದೇಶಕ: ಎಂಥಾ ಕಿಲಾಡಿ ನೋಡಿ ಈ ಬಾಹುಬಲಿ!

ಸಾಕಷ್ಟು ಸಿನಿಮಾ ನಿರ್ದೇಶಕರು ಜನರ ಕಿವಿಗೆ ಹೂವಿಡ್ತಾರೆ. ಅದರಲ್ಲಿ ಬಾಹುಬಲಿಯಂತಹ ಬಿಗ್ ಹಿಟ್ ಸಿನಿಮಾದ ನಿರ್ದೇಶಕರು ಕೂಡ ಸೇರಿದ್ದಾರೆ ಅನ್ನೋ ಚರ್ಚೆಗಳು ಟ್ರೋಲರ್ಸ್ ನಡುವೆ ನಡೆಯುತ್ತಿದೆ.
ಹೌದು..! ಬಾಹುಬಲಿ ಚಿತ್ರದ ಎರಡು ದೃಶ್ಯಗಳು ಇದೀಗ ಟ್ರೋಲರ್ಸ್ ಕೈಗೆ ಸಿಕ್ಕಿದೆ. ಈ ಎರಡು ದೃಶ್ಯಗಳು ಚಿತ್ರ ಬಿಡುಗಡೆಯಾಗಿ ವರ್ಷಗಳೇ ಕಳೆದ ಬಳಿಕ ಜನರಿಂದ ವಿಮರ್ಶೆಗೊಳಗಾಗುತ್ತಿದೆ. ಈ ಬಾಹುಬಲಿ ಎಷ್ಟು ದೊಡ್ಡ ಕೇಡಿ ಅಲ್ವಾ? ಅಂತ ಜನ ಬಾಹುಬಲಿ ಚಿತ್ರದ ದೃಶ್ಯಗಳನ್ನು ಕಂಡು ಇದೀಗ ಮಾತನಾಡುತ್ತಿದ್ದಾರೆ.
ಹೌದು..! ಬಾಹುಬಲಿ ಪಾರ್ಟ್ 1ರಲ್ಲಿ ಬಾಹುಬಲಿ ತನ್ನ ಪತ್ನಿಯ ಕೈಯನ್ನು ಸ್ಪರ್ಶಿಸಿದಕ್ಕಾಗಿ ಸೇನಾಧಿಕಾರಿಯೊಬ್ಬನ ತಲೆಯನ್ನು ರಾಜಸಭೆಯಲ್ಲೇ ಕತ್ತರಿಸಿ ಹಾಕುತ್ತಾನೆ. ಆದರೆ ಅದೇ ಬಾಹುಬಲಿ, ಚಿತ್ರದ ಹಾಡೊಂದರಲ್ಲಿ ನರ್ತಕಿಯರ ಸೊಂಟ ತನ್ನ ತಲೆಯನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸುತ್ತಾನೆ.
ತನ್ನ ಪತ್ನಿಯ ವಿಚಾರ ಬಂದಾಗ ಬಾಹುಬಲಿ ಶುದ್ಧ ಪುರುಷ, ಆದ್ರೆ, ಬೇರೆ ಯುವತಿಯೊಂದಿಗೆ ಬಾಹುಬಲಿ ಮಾಡಿದ್ದೇನು? ಬಾಹುಬಲಿ ಹೀರೋ ಅನ್ನೋ ಕಾರಣಕ್ಕೆ ಆತ ಮಾಡಿದ್ದೆಲ್ಲವೂ ಸರಿಯೇ? ಇವನು ದೊಡ್ಡ ವಿಲನ್ ಅಲ್ವಾ? ಅನ್ನೋ ವಾಸ್ತವ ಪ್ರಜ್ಞೆಯ ಮಾತುಗಳು ಇದೀಗ ಟ್ರೋಲರ್ಸ್ ಗಳ ನಡುವೆ ಚರ್ಚೆಯಾಗುತ್ತಿದೆ. ನಿರ್ದೇಶಕರು ಜನರ ಕಿವಿಗೆ ಯಶಸ್ವಿಯಾಗಿ ಹೂವಿಟ್ಟಿದ್ದಾರೆ ಅಂತ ಟ್ರೋಲರ್ಸ್ ಹೇಳುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw