ಹಂತಕ ಗೋಡ್ಸೆಯನ್ನು ಹೊಗಳುವುದು ಸರಿಯಲ್ಲ: ವಾಜಪೇಯಿ ಅವರ ಸಲಹೆಗಾರರಾಗಿದ್ದ ಸುಧೀಂದ್ರ ಕುಲಕರ್ಣಿ ಹೇಳಿಕೆ
ಸಂಘ ಪರಿವಾರದ ಅನೇಕರು ಮಹಾತ್ಮಾ ಗಾಂಧಿಯವರ ಹಂತಕ ನಾಥೂರಾಂ ಗೋಡ್ಸೆಯನ್ನು ಹೊಗಳುವುದು ಮತ್ತು ಶ್ಲಾಘಿಸುವುದನ್ನು ಮುಂದುವರಿಸುತ್ತಿರುವುದು ಸರಿಯಲ್ಲ ಎಂದು ಖ್ಯಾತ ಅಂಕಣಕಾರ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಲಹೆಗಾರರಾಗಿದ್ದ ಸುಧೀಂದ್ರ ಕುಲಕರ್ಣಿ ಹೇಳಿದ್ದಾರೆ. ಅವರು
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಭಾಗವತ್ ಅವರು ತಮ್ಮ ಸಂಘಟನೆಯೊಳಗಿನ ಎಲ್ಲಾ ಹಂತದ ಆರೆಸ್ಸೆಸ್ ಕಾರ್ಯಕರ್ತರಿಗೆ ಗೋಡ್ಸೆಯನ್ನು ಹೊಗಳುವುದನ್ನು ತಡೆಯಲು ಸೂಚಿಸಬೇಕು. ಏಕೆಂದರೆ ಇದು ಸಂಘರ್ಷದ ಸಂದೇಶವನ್ನು ರವಾನಿಸುತ್ತದೆ. ಗಾಂಧೀಜಿಯವರ ವಿಚಾರಗಳು ಮತ್ತು ಆದರ್ಶಗಳನ್ನು ಅನುಸರಿಸುವ ಮೂಲಕ ಮಾತ್ರ ಭಾರತವು ಅಂತರ್-ಧರ್ಮೀಯ ಸಾಮರಸ್ಯ ಮತ್ತು ಸಮಗ್ರ ಪ್ರಗತಿಯನ್ನು ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.
ಇನ್ನು ಮಂಗಳೂರು ಕೋಮು ಧ್ರುವೀಕರಣ ಮತ್ತು ಘರ್ಷಣೆಯ ಪ್ರಯೋಗಾಲಯ ಎಂಬ ಕುಖ್ಯಾತಿ ಗಳಿಸಿರುವುದು ವಿಷಾದಕರ ಮತ್ತು ದುರದೃಷ್ಟಕರ. ಮಂಗಳೂರನ್ನು ಮತ್ತೆ ಕೋಮು ಸೌಹಾರ್ದ ಮತ್ತು ಶಾಂತಿ ಪ್ರಯೋಗಾಲಯವಾಗಿ ಖ್ಯಾತಿ ಗಳಿಸಲು ಶ್ರಮಿಸಬೇಕು. ಈ ಪರಿವರ್ತನೆಯನ್ನು ಸಾಧಿಸುವ ಮೂಲಕ ಮಂಗಳೂರು ಮಾದರಿಯಾಗಿ ಹೊರಹೊಮ್ಮಬಹುದು. ಇದಕ್ಕಾಗಿ ಎಲ್ಲ ಧಾರ್ಮಿಕ ಮತ್ತು ಜಾತಿ ಸಂಘಟನೆಗಳ ಪ್ರಭಾವಿ ಮುಖಂಡರು, ಸಾಮಾಜಿಕ-ಸಾಂಸ್ಕೃತಿಕ ಮುಖಂಡರು, ಶಿಕ್ಷಣ ಸಂಸ್ಥೆಗಳ ಮುಖಂಡರು, ಮಹಿಳಾ ಸಂಘಟನೆಗಳ ಮುಖಂಡರು, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮದ ಪ್ರಮುಖರು, ಸಾಹಿತಿಗಳು ಮತ್ತು ಸಾಮಾನ್ಯ ನಾಗರಿಕರು ಒಗ್ಗಟ್ಟಿನಿಂದ ಶ್ರಮಿಸುವಂತೆ ಮನವಿ ಮಾಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw