ಅರ್ಚಕರ ಹೊಡೆದಾಟ ಬೆನ್ನಲ್ಲೇ ದೇವಸ್ಥಾನದ ಹುಂಡಿಗೆ ಬೆಂಕಿ!
ಚಾಮರಾಜನಗರ: ತಟ್ಟೆ ಕಾಸು ವಿಚಾರದಲ್ಲಿ ನಿನ್ನೆಯಷ್ಟೇ ಅರ್ಚಕರ ಹೊಡೆದಾಟ ನಡೆದ ಬೆನ್ನಲ್ಲೇ ಇದೀಗ ಚಿಕ್ಕಲೂರು ದೇವಸ್ಥಾನದ ಹುಂಡಿಗೆ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಚಿಕ್ಕಲೂರು ಶ್ರೀಕ್ಷೇತ್ರದ ಸಿದ್ದಪ್ಪಾಜಿ ಹಾಗೂ ಮಂಟೇಸ್ವಾಮಿ ದೇವಸ್ಥಾನದ ಅವರಣದಲ್ಲಿರುವ ಮುತ್ತುರಾಯನ ಗುಡಿಗೆ ಬೆಂಕಿಯಿಡಲಾಗಿದ್ದು, ಘಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಸೀಲ್ದಾರ್ ಹಾಗೂ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.
ನಾಳೆ ಹುಂಡಿ ಹಣ ಎಣಿಕೆಯಾಗಬೇಕಿತ್ತು. ಆದರೆ ಇಂದು ಕಿಡಿಗೇಡಿಗಳು ಕರ್ಪೂರ ಹಚ್ಚಿ ಹುಂಡಿಯೊಳಗೆ ಹಾಕಿದ್ದು, ಪರಿಣಾಮವಾಗಿ ಹುಂಡಿಗೆ ಬೆಂಕಿ ವ್ಯಾಪಿಸಿದೆ.
ಕಳೆದ ವಾರವಷ್ಟೇ ಬಾರಿ ಜಾತ್ರೆ ನಡೆದು ಲಕ್ಷಾಂತರ ಮಂದಿಭಕ್ತರು ಧಾವಿಸಿ ದರ್ಶನ ಪಡೆದಿದ್ದರು. ಭಕ್ತರು ಹಾಕಿರುವ ಕಾಣಿಕೆಗಳು ಇದೀಗ ಬೆಂಕಿ ಪಾಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw