ಶಾಸಕರಿಗೆ ವೇಶ್ಯೆ ಎಂಬ ಪದ ಪ್ರಯೋಗ: ಬಿ.ಕೆ.ಹರಿಪ್ರಸಾದ್ ಗೆ ಸಿಎಂ ಬೊಮ್ಮಾಯಿ ತಿರುಗೇಟು - Mahanayaka
3:59 AM Wednesday 11 - December 2024

ಶಾಸಕರಿಗೆ ವೇಶ್ಯೆ ಎಂಬ ಪದ ಪ್ರಯೋಗ: ಬಿ.ಕೆ.ಹರಿಪ್ರಸಾದ್ ಗೆ ಸಿಎಂ ಬೊಮ್ಮಾಯಿ ತಿರುಗೇಟು

cm bommai
18/01/2023

ಚಿಕ್ಕಮಗಳೂರು: ಚಿಕ್ಕಮಗಳೂರು ಹಬ್ಬಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರು ಆಗಮಿಸಿದ್ದು, ಮೊದಲು  ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮಗಳ ಮದುವೆಯಲ್ಲಿ ಭಾಗಿಯಾಗಿ ಬಳಿಕ ಸಂಜೆ 5 ಗಂಟೆಗೆ ಚಿಕ್ಕಮಗಳೂರು ಉತ್ಸವಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ.

ಕಡೂರು ತಾಲೂಕಿನ ಬೀರೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ,  ವಲಸೆ ಶಾಸಕರ ಬಗ್ಗೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿ.ಕೆ.ಹರಿಪ್ರಸಾದ್  ಏಕೆ ಹಾಗೇ ಹೇಳಿದ್ರೋ ಗೊತ್ತಿಲ್ಲ, ಸ್ವಲ್ಪ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ ಎಂದರು.

ಅವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಈ 17 ಜನ ಏನು ಮಾಡಿದ್ರು ಅದನ್ನೇ ಅವರ ನಾಯಕರು ಮಾಡಿದ್ದಾರೆ. 2007ರಲ್ಲಿ ಅವರ ಇಂದಿನ ನಾಯಕರು ಜೆಡಿಎಸ್ ಗೆ ರಾಜೀನಾಮೆ ನೀಡಿದ್ರು ಬಳಿಕ ಕಾಂಗ್ರೆಸ್ ಸೇರಿ ಹೇಗೆ ಗೆದ್ದು ಕಾಂಗ್ರೆಸ್ ಸೇರಿದ್ದಾರೋ, ಆ 17 ಜನರು ಏನು ಮಾಡಿದ್ದಾರೋ  ಅದನ್ನ ಅವರ ನಾಯಕರು ಮಾಡಿದ್ದಾರೆ, ಈ ಮಾತು ಇವರಿಗೆ ಅನ್ವಯಿಸಿದರೆ ಅವರಿಗೂ ಅನ್ವಯಿಸುತ್ತೆ ಎಂದು ತಿರುಗೇಟು ನೀಡಿದರು.

ಇನ್ನು ಸ್ವಪಕ್ಷದವರ ಮೇಲೆಯೇ ತಿರುಗಿ ಬಿದ್ದಿರುವ ಯತ್ನಾಳ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಅವರಿಗೆಲ್ಲಾ ಉತ್ಸಾಹ ಮಿತ್ರರು ಎಂದು ಹೇಳುತ್ತೇವೆ. ಉತ್ಸಾಹದಲ್ಲಿ ಮಾತನಾಡ್ತಾರೆ, ಅವರ ಜೊತೆಗೆ ಹೈಕಮಾಂಡ್ ಮಾತನಾಡ್ತಾರೆ ಸರಿಯಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ