ಒಬ್ಬ ಮಿನಿಸ್ಟರವ್ನಲ್ಲ ಬ್ರಾಹ್ಮಣ, ಒಂದೂವರೆ ಕೆ.ಜಿ. ತಿಂತಾನೆ ಸರ್: ವರ್ತೂರು ಪ್ರಕಾಶ್ ವಿಡಿಯೋ ವೈರಲ್
ಕೋಲಾರ: ಬಿಜೆಪಿ ನಾಯಕ ವರ್ತೂರು ಪ್ರಕಾಶ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಚುನಾವಣೆ ಸಂದರ್ಭದಲ್ಲಿಯೇ ಲಿಂಗಾಯಿತ ಹಾಗೂ ಬ್ರಾಹ್ಮಣರ ಬಗ್ಗೆ ಅವರು ಆಡಿರುವ ಮಾತು ಚರ್ಚೆಗೀಡಾಗುತ್ತಿದೆ.
ಕೋಲಾರದಲ್ಲಿ ಪತ್ರಿಕಾಗೋಷ್ಠಿಗೂ ಮುನ್ನ ವರ್ತೂರು ಪ್ರಕಾಶ್ ಕುಳಿತುಕೊಂಡು ಫೋನ್ ನಲ್ಲಿ ಮಾತನಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ಅವರ ಧ್ವನಿ ಸ್ಪಷ್ಟವಾಗಿ ಕೇಳಿ ಬಂದಿದೆ. ನಾನ್ ವೆಜ್ ತಿನ್ನೋದು ಹಾಗೂ ಕುಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು. ಅವರು ಲಿಂಗಾಯಿತರು ಹಾಗೂ ಬ್ರಾಹ್ಮಣರು ಒಂದೊಂದು ತಿನ್ನುತ್ತಾರೆ ಅಂತ ಹೇಳುವ ವಿಡಿಯೋ ವೈರಲ್ ಆಗಿದೆ.
ಗದಗ್ ಜಿಲ್ಲೆಯ 12 ಜನ ಲಿಂಗಾಯರು ಒಬ್ಬೊಬ್ಬರು ಒಂದೊಂದು ಕೆ.ಜಿ ತಿಂತಾರೆ ಸರ್ ದೇವರಾಣೆ, ಒಬ್ಬ ಮಿನಿಸ್ಟರವ್ನಲ್ಲ ಬ್ರಾಹ್ಮಣ, ಲೇಬರ್ ಮಿನಿಸ್ಟರ್ ಆಗಿದ್ದ ಕಾಂಗ್ರೆಸ್ಸಿಂದ ಬಂದಿದ್ನಲ್ಲ, ನನ್ ತಾಯಾಣೆ ಆತ ಒಂದೂವರೆ ಕೆ.ಜಿ. ತಿಂತಾನೆ ಸರ್, ವೆಂಕಟಸ್ವಾಮಿ ಸತ್ಯವಾಗ್ಲೂ ನಾನೇ ಸರ್ ಹಾಕಿ ಕೊಡೋದು, ನೀವೊಬ್ರೆ ಸರ್ ದೇವರಾಣೆ ಒಳ್ಳೆಯವರು.
ವರ್ತೂರು ಪ್ರಕಾಶ್ ಅವರು ಯಾರ ಜೊತೆಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು ಅನ್ನೋದು ತಿಳಿದು ಬಂದಿಲ್ಲ, ಆದರೆ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ಈ ವಿಡಿಯೋ ಸಕ್ಕತ್ ವೈರಲ್ ಆಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw