ಚಿಕ್ಕಮಗಳೂರು ಉತ್ಸವ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಂಡಿ ತಿಂದು ಕಾಫಿ ಕುಡಿದಿದ್ದು ಹೀಗೆ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ಪಾಲ್ಗೊಂಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಸ್ತೆ ಬದಿಯ ಫುಡ್ ಕೋರ್ಟ್ ನಲ್ಲಿ ತಿಂಡಿ ತಿಂದು ಕಾಫಿನಾಡ ಕಾಫಿ ಸವಿದರು.
ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಫುಡ್ ಕೋರ್ಟ್ ಗೆ ಹೋದ ಪ್ರಹ್ಲಾದ್ ಜೋಶಿ ಹಾಗೂ ಮುರುಗನ್ ಅವರು ತೆರಳಿದ್ದಾರೆ. ಈ ವೇಳೆ ಪುಳಿಯೋಗರೆ, ಮದ್ದೂರು ವಡೆ, ಹೋಳಿಗೆ, ಬಜ್ಜಿ, ಪೊಂಗಲ್, ಶಾವಿಗೆ ಬಾತ್ ತಿಂದು ಕಾಫಿ ಕುಡಿದರು.
ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದಾರೆ. ಸಾವಿರಾರು ಜನರ ಮಧ್ಯೆಯೇ ಪ್ರಹ್ಲಾದ್ ಜೋಶಿ ತಿಂಡಿ ಸೇವನೆಯಲ್ಲಿ ಮಗ್ನರಾದರು. ಅವರಿಗೆ ಶಾಸಕ ಸಿ.ಟಿ. ರವಿ, ಮುರುಗನ್ ಸಾಥ್ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw