ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಫೋಟೋಗ್ರಫಿಯ ಜ್ಞಾನ ಅಗತ್ಯ: ಡಾ.ಆರ್.ನಾಗರಾಜ್
ಬಾಗಲಕೋಟೆ: ಇಂದಿನ ದಿನಗಳಲ್ಲಿ ಮುದ್ರಣ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಲು ಸಜ್ಜಾಗುತ್ತಿರುವ ಪದವಿಯಲ್ಲಿ ಪತ್ರಿಕೋದ್ಯಮ ವಿಷಯವನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ಟುಡಿಯೋದ ಮತ್ತು ಫೋಟೋ ಗ್ರಫಿಯ ಜ್ಞಾನ ಅಗತ್ಯವಾಗಿದೆ ಎಂದು ಸಾಹಿತಿಗಳು ಮತ್ತು ಪತ್ರಿಕಾ ಅಂಕಣ ಬರಹಗಾರರಾದ ಡಾ. ಆರ್ ನಾಗರಾಜ್ ಅವರು ಅಭಿಪ್ರಾಯ ಪಟ್ಟರು.
ಅವರು ಇತ್ತೀಚೆಗೆ ಮುಧೋಳ ನಗರದ ಬಿವಿವಿ ಸಂಘದ ಎಸ್ ಆರ್ ಕಂಠಿ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗವು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೂತನವಾಗಿ ಆರಂಭವಾಗಿರುವ ಸ್ಟುಡಿಯೋವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಸ್ಟುಡಿಯೋಗಳಲ್ಲಿ ಆರ್ಟ್ಸ್ ಸ್ಟುಡಿಯೋ ಶೈಕ್ಷಣಿಕ ಸ್ಟುಡಿಯೋ ಪ್ರೊಡಕ್ಷನ್ ಸ್ಟುಡಿಯೋ ಅನಿಮೇಷನ್ ಸ್ಟುಡಿಯೋ ಕಾಮಿಕ್ಸ್ ಸ್ಟುಡಿಯೋ ಬೋಧನಾ ಸ್ಟುಡಿಯೋ ಮಾಸ್ಟರಿಂಗ್ ಸ್ಟುಡಿಯೋ ನಟನಾ ಸ್ಟುಡಿಯೋ ಚಲನಚಿತ್ರ ಸ್ಟುಡಿಯೋ ಫೋಟೋ ಜರ್ನಲಿಸಂ ಸ್ಟುಡಿಯೋ ಫೋಟೋಗ್ರಾಫಿಕ್ ಸ್ಟುಡಿಯೋ ರೇಡಿಯೋ ಸ್ಟುಡಿಯೋ ರೆಕಾರ್ಡಿಂಗ್ ಸ್ಟುಡಿಯೋ ದೂರದರ್ಶನ ಸ್ಟುಡಿಯೋ ಎಂಬ ವಿವಿಧ ಪ್ರಕಾರಗಳಿದ್ದು ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಸ್ಟುಡಿಯೋ ಮತ್ತು ಬೋಧನಾ ಸ್ಟುಡಿಯೋ ಫೋಟೋ ಜರ್ನಲಿಸಮ್ ಸ್ಟುಡಿಯೋ ಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎನ್ನುವುದಕ್ಕೆ ಇಂದು ಉದ್ಘಾಟನೆ ಯಾಗಿರುವ ಸ್ಟುಡಿಯೋ ಸಾಕ್ಷಿಯಾಗಿದೆ ಎಂದವರು ಅಭಿಪ್ರಾಯಪಟ್ಟರು.
ಶೈಕ್ಷಣಿಕ ಸ್ಟುಡಿಯೋಗಳಲ್ಲಿ, ವಿದ್ಯಾರ್ಥಿಗಳು ವಿನ್ಯಾಸಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಕಲಿಯುತ್ತಾರೆ, ವಾಸ್ತುಶಿಲ್ಪದಿಂದ ಉತ್ಪನ್ನ ವಿನ್ಯಾಸದವರೆಗೆ. ನಿರ್ದಿಷ್ಟವಾಗಿ ಹೇಳುವುದಾದರೆ, ಶೈಕ್ಷಣಿಕ ಸ್ಟುಡಿಯೋಗಳು ಸ್ಟುಡಿಯೋ ಸೆಟ್ಟಿಂಗ್ಗಳಾಗಿವೆ, ಅಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸೂಚನಾ ಸಹಾಯದಿಂದ ಡ್ರಾಫ್ಟ್ ಮತ್ತು ವಿನ್ಯಾಸವನ್ನು ಕಲಿಯುತ್ತಾರೆ. ಶೈಕ್ಷಣಿಕ ಸ್ಟುಡಿಯೋಗಳನ್ನು ವಿದ್ಯಾರ್ಥಿಗಳು “ಸ್ಟುಡಿಯೋ” ಎಂದು ಆಡುಮಾತಿನಲ್ಲಿ ಉಲ್ಲೇಖಿಸುತ್ತಾರೆ.
ಈ ಸ್ಟುಡಿಯೋಗಳಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಸಾಧನವಾದ ಕ್ಯಾಮರಾವನ್ನು ಸಹ ಬಳಸಲು ಅಗತ್ಯವಾದ ವಾತಾವರಣವನ್ನು ಕಲ್ಪಿಸಿ ಕೊಡುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಪ್ರೊ ಬಸವರಾಜ್ ಆರ್ ಪಾಟೀಲ್ ಅವರು ಮಾತನಾಡುತ್ತಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗವು ಬಹಳ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು ಇದೀಗ ಸ್ಟುಡಿಯೋ ಆರಂಭವಾಗಿದ್ದು ವಿದ್ಯಾರ್ಥಿಗಳು ಇದರ ಬಳಕೆಯನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು ಅಲ್ಲದೆ ವಿಶ್ವವಿದ್ಯಾಲಯದಲ್ಲಿ ಸಿಗುವಂತಹ ಎಲ್ಲಾ ಶೈಕ್ಷಣಿಕ ಪರಿಕರಗಳು ಮಹಾವಿದ್ಯಾಲಯದಲ್ಲಿ ದೊರೆಯುತ್ತಿದ್ದು ಅವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಮುಂದಿನ ಜೀವನವನ್ನು ರೂಪಿಸಿಕೊಳ್ಳಬೇಕು ಬೇಕು ಎಂದು ಅವರು ತಿಳಿಸಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ವಿಶ್ವನಾಥ ಮುನ್ನೊಳ್ಳಿಯವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಪ್ರಸ್ತುತ ಮಹಾವಿದ್ಯಾಲಯದಲ್ಲಿ ಮೂರು ವರ್ಷದ ಪದವಿ ತರಗತಿಗಳಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪತ್ರಿಕೋದ್ಯಮ ವಿಷಯವನ್ನು ಅಭ್ಯಾಸ ಮಾಡುತ್ತಿದ್ದು ಪತ್ರಿಕೋದ್ಯಮ ಲ್ಯಾಬ್ ಇದ್ದು ಪತ್ರಿಕೋದ್ಯಮ ವಿಷಯಕ್ಕೆ ಸಂಬಂಧಪಟ್ಟಂತಹ ಕೃತಿಗಳು ಲೈಬ್ರರಿಯಲ್ಲಿದ್ದು ಅವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಪತ್ರಕರ್ತರಾಗಲು ಶ್ರಮ ಪಡಬೇಕು ಎಂದು ಅಭಿಪ್ರಾಯ ಪಟ್ಟರು ಕಾರ್ಯಕ್ರಮದಲ್ಲಿ ಗ್ರಂಥಪಾಲಕರಾದ ಪ್ರೊ. ಚಿರಂಜೀವಿ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಿದ್ದರು ಪತ್ರಿಕೋದ್ಯಮ ವಿಷಯದ ಪ್ರಾಧ್ಯಾಪಕರಾದ ಪ್ರೊ. ಶ್ವೇತಾ ಸಣ್ಣಕ್ಕಿ ಅವರು ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw