ಭಾರತ ಮತ್ತು ಚೀನಾವು ಅಮೆರಿಕ, ಯುರೋಪ್ ರಾಷ್ಟ್ರಕ್ಕಿಂತ ಹಲವು ವಿಚಾರದಲ್ಲಿ ಮುಂದಿದೆ: ರಷ್ಯಾ
ಭಾರತ ಮತ್ತು ಚೀನಾ ಈ ಎರಡು ದೇಶಗಳು ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಿಗಿಂತ ಹಲವಾರು ವಿಚಾರಗಳಲ್ಲಿ ಮುಂದಿದೆ ಎಂದು ರಷ್ಯಾ ಹೇಳಿದೆ.
ಎರಿಟ್ರಿಯಾದಲ್ಲಿ ಕರೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಜಾಗತಿಕ ಆರ್ಥಿಕ ಹಾಗೂ ರಾಜಕೀಯ ಪ್ರಭಾವದ ಬಗ್ಗೆ ಮಾತನಾಡಿದ ರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್ ಅವರು, ಕೇವಲ ಒಂದು ದೇಶ ಪ್ರಾಮುಖ್ಯತೆ ಪಡೆದುಕೊಳ್ಳುವ ಕಾಲ ಹೋಗಿ ಎಲ್ಲಾ ದೇಶಗಳು ತಮ್ಮದೇ ರೀತಿಯಲ್ಲಿ ಅಭಿವೃದ್ಧಿ ಹೊಂದುವ ವ್ಯವಸ್ಥೆ ಆರಂಭವಾಗಿದೆ ಎಂದು ಹೇಳಿದ್ದಾರೆ.
ಅಮೆರಿಕ, ನ್ಯಾಟೋ ಮತ್ತು ಯುರೋಪಿಯನ್ ಯೂನಿಯನ್ ಸೇರಿದಂತೆ ಸಂಪೂರ್ಣ ಪಾಶ್ಚಿಮಾತ್ಯ ದೇಶಗಳು ಈ ಬೆಳವಣಿಗೆಯನ್ನು ತಡೆಯಲು ಪ್ರಯತ್ನಿಸುತ್ತಿವೆ, ಆದರೆ ಅವರ ಪ್ರಯತ್ನ ವ್ಯರ್ಥ, ಹೊಸದಾಗಿ ಸೃಷ್ಟಿಯಾಗಿರುವ ಶಕ್ತಿಗಳನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಸೆರ್ಗಿ ಹೇಳಿದರು.
ಚೀನಾ ಮತ್ತು ಅಮೆರಿಕ ಮಿತ್ರ ದೇಶಗಳಿಗಿಂತ ಹಲವಾರು ರೀತಿಯಲ್ಲಿ ಮುಂದಿವೆ ಎಂದಿರುವ ಸೆರ್ಗಿ ಲಾವ್ರೋವ್ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಹರಿಹಾಯ್ದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw