ಪ್ರಾಣ ಕಳೆದುಕೊಂಡವರ ಕುಟುಂಬದ ನೋವು ಇವರಿಗೆ ಅರ್ಥವಾಗುತ್ತದೆಯೇ?: ಯು.ಟಿ.ಖಾದರ್ ಪ್ರಶ್ನೆ
ಮಂಗಳೂರು: ಕೊಲೆಗೆ ನಾವೇ ಪ್ರೇರಣೆ ಎಂದವರು ಸಮಾಜಕ್ಕೆ ಅಪಾಯಕಾರಿಯಾಗಿದ್ದು, ಇವರೇ ನಮ್ಮ ನಡುವಿನ ನಿಜವಾದ ದೇಶದ್ರೋಹಿಗಳು ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಸಂಘಪರಿವಾರ ನಾಯಕ ಶರಣ್ ಪಂಪ್ ವೆಲ್ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಖಾದರ್, ಹಿಂದು ಆಗಲೀ, ಮುಸ್ಲಿಂ ಆಗಲೀ ಯಾಕೆ ಕೊಲೆ ಆಗಬೇಕು..? ಕೊಲೆಯಾಗಬೇಕೆಂದು ಬಿಜೆಪಿಯವರು ಕಾಯುತ್ತಿರುವುದು ಯಾಕೆ..? ಪ್ರಾಣ ಕಳೆದುಕೊಂಡವರ ಕುಟುಂಬದ ಅಕ್ಕ, ತಂಗಿಯರ ನೋವು ಇವರಿಗೆ ಅರ್ಥ ಆಗುತ್ತದೆಯೇ? ಎಂದು ಯು.ಟಿ.ಖಾದರ್ ಪ್ರಶ್ನಿಸಿದರು.
ಚುನಾವಣೆಗೋಸ್ಕರ, ಮಾಧ್ಯಮದಲ್ಲಿ ಬಿಲ್ಡಪ್ ಸಿಗತ್ತೆ ಅಂತ ಹೇಳಿಕೆ ಕೊಡುತ್ತಾರೆ.ಇಂತಹವರು ಸಮಾಜಕ್ಕೂ ಭಾರ, ಜಿಲ್ಲೆಗೂ ಭಾರ, ಇವರನ್ನು ಗಡಿಪಾರು ಮಾಡಬೇಕು. ಇವರ ಹೇಳಿಕೆಯಿಂದ ಜನರಲ್ಲಿ ಭಯ ಶುರುವಾಗಿದೆ, ಯಾಕೆ ಇಂತಹವರನ್ನು ಸಮಾಜ ಹೊತ್ತುಕೊಳ್ಳಬೇಕು ಎಂದು ಅವರು ಪ್ರಶ್ನಿಸಿದರು.
ಫಾಜಿಲ್ ಕೊಲೆ ಪ್ರಕರಣ ಸಂಪೂರ್ಣ ಮರು ತನಿಖೆಯಾಗಬೇಕು. ಉಳ್ಳಾಲದಲ್ಲಿ ಜನ ಸೌಹಾರ್ದ ಇದ್ದಾರೆ, ಕೋಮುವಾದಿ ಶಕ್ತಿಗಳಿಗೆ ಜನ ಅವಕಾಶ ಕೊಡಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಎಲ್ಲ ಕೊಲೆಗಳ ಬಗ್ಗೆಯೂ ತನಿಖೆ ಮಾಡಿಸ್ತೀವಿ ಎಂದು ಯು.ಟಿಖಾರ್ ಇದೇ ವೇಳೆ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw