ಬೆಳೆಬಾಳುವ ಮರ ಸಾಗಾಟದ ವೇಳೆ ಅರಣ್ಯಾಧಿಕಾರಿಗಳಿಂದ ದಾಳಿ: ಮರ ಸಹಿತ ಆರೋಪಿಗಳ ಬಂಧನ
ಬೆಳ್ತಂಗಡಿ: ಮೊಗ್ರುಗ್ರಾಮದ ಮುಗೇರಡ್ಕ ಎಂಬಲ್ಲಿಂದ ರಾತ್ರಿ ವೇಳೆ ಬೆಲೆಬಾಳುವ ಮರ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮರದ ದಿಮ್ಮಿ ಸಹಿತ ಆರೋಪಿಗಳನ್ನು ಜ.30ರಂದು ವಶಕ್ಕೆ ಪಡೆದಿದ್ದಾರೆ.
ಬಂದಾರು ಶಾಖಾ ಉಪ ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಖಚಿತ ಮಾಹಿತಿಯಂತೆ ಬೆಳ್ತಂಗಡಿ ತಾಲೂಕಿ ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ ಜ.30ರಂದು ರಾತ್ರಿ ಸುಮಾರು 2:30ರ ಸಮಯಕ್ಕೆ ಅಕ್ರಮವಾಗಿ ಹೆಬ್ಬಲಸು, ಮಾವು ಹಾಗೂ ಕಾಡು ಜಾತಿಯ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವ ಲಾರಿಯನ್ನು ಪತ್ತೆ ಹಚ್ಚಿದ್ದರು.
ಲಾರಿಗೆ ಬೆಂಗಾವಲಾಗಿ ಸಂಚರಿಸುತ್ತಿದ್ದ ಪಾಣೆ ಮಂಗಳೂರಿನ ಅಬ್ಬಾಸ್, ಕಡಬ ಮರ್ದಾಳದ ಇರ್ಫಾನ್, ಇಳಂತಿಲ ಗ್ರಾಮದ ಅಂಡೆತ್ತಡ್ಕ ನಿವಾಸಿಗಳಾದ ಅಶ್ರಫ್, ರಹಿಮಾನ್ ಮರ ಕಡಿದ ಸ್ಥಳದ ವಾರೀಸುದಾರ ಮುರ ಗ್ರಾಮದ ಕೃಷ್ಣಪ್ಪ ಹಾಗೂ ಲಾರಿ ಚಾಲಕ ಬಂಟ್ವಾಳದ ಬೋಗೋಡಿ ನಿವಾಸಿ ಅಶ್ರಫ್ ಅಂಬೋನು ಅವರ ವಿರುದ್ಧ ಅರಣ್ಯ ಸಂರಕ್ಷಣೆ ಕಾಯ್ದೆಯಂತೆ ದೂರು ದಾಖಲಿಸಲಾಗಿದೆ.
ಲಾರಿ ಸಂಖ್ಯೆ ಕೆಎ-13, ಎ-2102 ಹಾಗೂ ಬೆಂಗಾವಲು ವಾಹನ ಕೆಎ-21 ಇಬಿ- 7581ಹಾಗೂ ಮೂರು ಮೋಟ ಸೈಕಲ್, ಕೆಎ21 ವೈ 6102, ಕೆಎ21 ವೈ 2658 ಹಾಗೂ ಕೆಎ-21 ವೈ-0537 ಮತ್ತು ಲಾರಿಯಲ್ಲಿದ್ದ 26 ದಿಮ್ಮಿಗಳನ್ನು ವಶಕ್ಕೆ ಪಡೆಯಲಾಗಿದೆ.
ಪಾಣೆಮಂಗಳೂರಿನ ಅಬ್ಬಾಸ್, ಮರ್ದಾಳ ನಿವಾಸಿ ಇರ್ಫಾನ್, ಮೊಗ್ರು ನಿವಾಸಿ ಕೃಷ್ಣಪ್ಪನನ್ನು ಬಂಧಿಸಲಾಗಿದ್ದು, ಉಳಿದವರು ಸ್ಥಳದಿಂದ ಪರಾರಿಯಾಗಿದ್ದಾರೆ. ವಶ ಪಡಿಸಿದ ಮರಗಳ ಸೊತ್ತುಗಳ ಮೌಲ್ಯ 2.7ಲಕ್ಷ ರೂ. ವಾಹನಗಳ ಅಂದಾಜು ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಉಪ್ಪಿನಂಗಡಿ ವಲಯ ಅರಣ್ಯಧಿಕಾರಿ ಜಯಪ್ರಕಾಶ ಕೆ.ಕೆ., ಮಾರ್ಗದರ್ಶನದಂತೆ ಬಂದಾರು ಶಾಖಾ ಉಪ ವಲಯ ಅರಣ್ಯಾಧಿಕಾಲ ಜೆರಾಲ್ಡ್ ಡಿಸೋಜ, ಹಾಗೂ ಗಸ್ತು ಅರಣ್ಯ ಪಾಲಕರಾದ ಜಗದೀಶ ಕೆ.ಎನ್., ಪ್ರಶಾಂತ್ ಮಾಳಗಿ, ಎಂ.ಎಂ. ಜಗದೀಶ, ಅರಣ್ಯ ವೀಕ್ಷಕರಾದ ರವಿ ಮತ್ತು ಸೇಸಪ್ಪ ಗೌಡ ವಾಹನ ಚಾಲಕರಾದ ಕಿಶೋರ್ ಕುಮಾರ್ ಕಾರ್ಯಾಚರಣೆ ನಡೆಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw