ಸಂವಿಧಾನ ದಿನಾಚರಣೆಯನ್ನು ಹಬ್ಬದಂತೆ ಆಚರಿಸಿದರೆ ಪ್ರಬುದ್ಧಭಾರತದ ಕನಸು ನನಸು: ಶಿವರಾಜ್ ಪಿ.ಬಿ.
ಬೆಳ್ತಂಗಡಿ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ಪ್ರಬುದ್ಧಭಾರತವನ್ನು ನಿರ್ಮಿಸಬೇಕಾದರೆ, ನಾವು ಸಂವಿಧಾನ ದಿನಾಚರಣೆಯನ್ನು ಹಬ್ಬದಂತೆ ಆಚರಿಸಬೇಕು ಎಂದು ಅಲೇರಿ ಶ್ರೀ ಸತ್ಯಸಾರಮಣಿ ಮೂಲ ಕ್ಷೇತ್ರ ಮಿಜಾರು ಇದರ ಅಧ್ಯಕ್ಷರಾದ ಶಿವರಾಜ್ ಪಿ.ಬಿ. ಅಭಿಪ್ರಾಯಪಟ್ಟರು.
ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಸ೦ವಿಧಾನ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ನಡೆದ 73ನೇ ಭಾರತೀಯ ಸಂವಿಧಾನ ಜಾರಿ ದಿನಾಚರಣೆ ಅಂಗವಾಗಿ ಆದಿದ್ರಾವಿಡ ಸಮಾಜ ಬಾಂಧವರಿಗೆ ಆಯೋಜಿಸಿರುವ ಅಂತರ್ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಮುಕ್ತ ನೃತ್ಯ ಸ್ಪರ್ಧೆ ಸಂವಿಧಾನ ಟ್ರೋಫಿ-2023 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಿದ್ರಾವಿಡ ಸಮಾಜ ಸೇವಾ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷರಾದ ಶೇಖರ್ ಧರ್ಮಸ್ಥಳ ವಹಿಸಿದ್ದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಠಾಣಾ ಹೆಡ್ ಕಾನ್ಸ್ ಟೇಬಲ್ ವೆಂಕಪ್ಪ ಹಾಗೂ ಉದ್ಯಮಿ ಸುಂದರ್ ಕಾಶಿಪಟ್ಣ, ಸಂವಿಧಾನ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಇದರ ಗೌರವಾಧ್ಯಕ್ಷ ನಾಗಪ್ಪ ವೇಣೂರು, ಕುಕ್ಕೇಡಿ ಗ್ರಾ,ಪಂ. ಅಧ್ಯಕ್ಷ ಜನಾರ್ಧನ ಪೂಜಾರಿ, ಬೆಳ್ತಂಗಡಿ ವಲಯ ಅರಣ್ಯಧಿಕಾರಿ ಕು. ಕಮಲಾ ಉಜಿರೆ, ಬಂಟ್ವಾಳ ಪುರಸಭೆ ಸದಸ್ಯ ಜನಾರ್ಧನ ಚೆಂಡ್ತಿಮಾರ್, ಬೆಳ್ತಂಗಡಿ ಉಪತಹಶೀಲ್ದಾರರು ಶಂಕರ್, ಕರ್ನಾಟಕ ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಬಲ್ಲಾಲ್ ಬಾಗ್, ದೈಹಿಕ ಶಿಕ್ಷಕರಾದ ಪ್ರಕಾಶ್ ಬೆಳ್ವಾಯಿ, ಮೇಲಂತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಹರಿಣಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw