ಭಾರತದ ಮೊದಲ ಟ್ರಾನ್ಸ್ ಮೇನ್ ಝಹದ್ ಫಾಝಿಲ್ ಈಗ ತುಂಬು ಗರ್ಭಿಣಿ
ಕೊಟ್ಟಾಯಂ: ಕೇರಳದ ಕೋಝಿಕ್ಕೋಡ್ ನ ಉಮ್ಮಲತ್ತೂರ್ ನ ಟ್ರಾನ್ಸ್ ಜೆಂಡರ್ ದಂಪತಿ ಝಿಯಾ ಮತ್ತು ಝಹದ್ ಫಾಝಿಲ್ ಅವರು ಇದೀಗ ತಮ್ಮ ಮೊದಲ ಮಗುವನ್ನು ಪಡೆಯುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.
ಹೌದು…! ಹೆಣ್ಣಾಗಿ ಹುಟ್ಟಿ, ಗಂಡಾಗಿ ಬದಲಾದ ಝಹದ್ ಫಾಝಿಲ್ ಹಾಗೂ ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ ಝಿಯಾ ಪವಲ್ ಪರಸ್ಪರ ವಿವಾಹವಾಗಿದ್ದು, ಇದೀಗ ಭಾರತದ ಮೊದಲ ಟ್ರಾನ್ಸ್ ಮ್ಯಾನ್ ತಂದೆಯಾಗಲು ಸಿದ್ಧರಾಗಿದ್ದಾರೆ.
ಇವರು ಮಗುವನ್ನು ದತ್ತುಪಡೆಯಲು ನಿರ್ಧರಿಸಿದ್ದರು. ಆದ್ರೆ, ಕಾನೂನಿನ ತೊಡಕು ಏರ್ಪಟ್ಟಾಗ ಗಂಡಾಗಿದ್ದರೂ ಕೂಡ ಝಹದ್ ತಾನು ಗರ್ಭಿಣಿಯಾಗಬೇಕು ಎಂದು ನಿರ್ಧರಿಸುತ್ತಾರೆ. ಈ ಹಿಂದೆ ಅವರು ಸ್ತ್ರೀಯಾಗಿದ್ದರೂ, ಆ ಸ್ತ್ರೀ ತನವನ್ನು ಬಿಟ್ಟು ಗಂಡಾಗಿ ಬದಲಾಗಿದ್ದರು. ಆದರೂ ಅವರೊಳಗಿನ ತಾಯಿತನ ಮರೆಯಾಗಿರಲಿಲ್ಲ. ತನ್ನ ಪ್ರೀತಿಯ ಪತ್ನಿ ಝಿಯಾಳಿಗಾಗಿ ಅವರು ತಾಯಿಯಾಗಲು ಪ್ರೇರೇಪಿಸಿತು.
ಮಗುವನ್ನು ಪಡೆಯ ಬೇಕು ಅನ್ನೋ ಯೋಚನೆ ಬರುತ್ತಿದ್ದಂತೆಯೇ ಅವರು ಕೋಝೀಕ್ಕೋಡ್ ಮೆಡಿಕಲ್ ಕಾಲೇಜಿನ ವೈದ್ಯರ ಮಾರ್ಗದರ್ಶನದಲ್ಲಿ ತಜ್ಞ ಪರೀಕ್ಷೆಗಳನ್ನು ನಡೆಸಿದ್ದು, ಈ ವೇಳೆ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇಲ್ಲ ಎನ್ನುವುದು ತಿಳಿದು ಬಂತು. ಝಹದ್ ಗಂಡಾಗಿ ಬದಲಾದ ವೇಳೆ ಅವರ ಸ್ತನಗಳನ್ನು ತೆಗೆದು ಹಾಕಲಾಗಿತ್ತು. ಆದರೆ ಗರ್ಭಾಶಯ ಇತ್ಯಾದಿಗಳನ್ನು ಬದಲಿಸಲಾಗಿಲ್ಲ ಹೀಗಾಗಿ ಅವರು ತಾಯಿಯಾಲು ಸಹಕಾರಿಯಾಗಿದೆ. ಇನ್ನೂ ಮಾರ್ಚ್ 4ಕ್ಕೆ ಅವರು ಮಗುವಿಗೆ ಜನ್ಮ ನೀಡಲಿದ್ದು, ಈಗ ಅವರು ತುಂಬು ಗರ್ಭೀಣಿಯಾಗಿದ್ದಾರೆ.
ಇನ್ನೂ ಮಗುವನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಇನ್ ಸ್ಟಾಗ್ರಾಮ್ ನಲ್ಲಿ ಈ ಸಂತಸವನ್ನು ಹಂಚಿಕೊಂಡಿರುವ ಝೀಯಾ ಪವಲ್, ಹುಟ್ಟಿನಿಂದಲೋ ದೇಹದಿಂದಲೋ ಹೆಣ್ಣಾಗದಿದ್ದರೂ, ನನ್ನೊಳಗಿನ ಹೆಣ್ತನ ಬೆಳೆದುನಿಂತಿದೆ. ನನ್ನೊಳಗಿನ ಅಮ್ಮ ಅನ್ನೋ ಕನಸುಗಳು, ಯಾರೆಂದು ತಿಳಿಯದವನಿಗೋಸ್ಕರ(ಮಗು) ಒಂಬತ್ತು ತಿಂಗಳು ಕಾಯುವುದು ತಾಯಿಯ ಪ್ರಕ್ರಿಯೆ ಅಲ್ಲವೇ? 9 ತಿಂಗಳು ಕಾದ ಬಳಿಕ ಯಾರೆಂದು ತಿಳಿದವನಿಗಾಗಿ ತಾಯಿಯಾಗಿ ಮಗುವಿನ ಧ್ವನಿ ಕೇಳಿಸಿಕೊಳ್ಳಲು ನಾನು ಕಾಯುತ್ತಿದ್ದೇನೆ ಎಂದು ತಮ್ಮ ಆಸೆ ಕನಸುಗಳ ಕುರಿತ ಸಾಲುಗಳನ್ನು ಬರೆದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw