ಗ್ರಾ.ಪಂ. ಚುನಾವಣೆ:  ಜೈಲಿನಲ್ಲಿದ್ದುಕೊಂಡು ಸ್ಪರ್ಧಿಸಿದ ಕೊಲೆ ಆರೋಪಿ ಪರುಶರಾಮ ಸೋಲು - Mahanayaka
11:14 PM Wednesday 11 - December 2024

ಗ್ರಾ.ಪಂ. ಚುನಾವಣೆ:  ಜೈಲಿನಲ್ಲಿದ್ದುಕೊಂಡು ಸ್ಪರ್ಧಿಸಿದ ಕೊಲೆ ಆರೋಪಿ ಪರುಶರಾಮ ಸೋಲು

31/12/2020

ಬೆಳಗಾವಿ: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ  ಕೊಲೆ ಆರೋಪಿ ಪರುಶರಾಮ ಪಾಕರೆ ಅವರು ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದು,  ಅವರು ಸೋಲನ್ನು ಅನುಭವಿಸಿದ್ದಾರೆ.

ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ 1ನೇ ವಾರ್ಡ್‌ನಿಂದ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಪರುಶರಾಮ ಪಾಕರೆ, 430 ಮತಗಳನ್ನು ಪಡೆದುಕೊಂಡಿದ್ದಾರೆ. ಅವರ ಪ್ರತಿಸ್ಪರ್ಧಿ ರಾಜು ಸೋಮನಾಥ ವರತೆ 586 ಮತಗಳನ್ನು ಪಡೆದಿದ್ದು ಇದರಿಂದಾಗಿ 156 ಮತಗಳ ಅಂತರದಲ್ಲಿ ಅವರು ಸೋಲನುಭವಿಸಿದ್ದಾರೆ.

ಮುಚ್ಚಂಡಿ ಗ್ರಾಮದ ಮಹೇಶ ಅವ್ವಾನೆ ಎಂಬ ವ್ಯಕ್ತಿಯ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಪರುಶರಾಮ ಪಾಕರೆ ಜೈಲು ಪಾಲಾಗಿದ್ದಾರೆ.  ಈ ಪ್ರಕರಣದಲ್ಲಿ ಪರುಶರಾಮ ನಾಲ್ಕನೆ ಆರೋಪಿಯಾಗಿದ್ದಾರೆ.

ಪರುಶರಾಮ ಪರವಾಗಿ ಸ್ನೇಹಿತರೇ ಗ್ರಾಮದಲ್ಲಿ ಪ್ರಚಾರವನ್ನು ಮಾಡಿದ್ದರು. ಜೈಲಿನಲ್ಲಿದ್ದ ಪರುಶರಾಮ ಅಲ್ಲಿಂದಲೇ ನಾಮಪತ್ರಗಳಿಗೆ ಸಹಿ ಮಾಡಿ ಕಳಿಸಿದ್ದರು. ಪರುಶರಾಮ ಪರವಾಗಿ ಸ್ನೇಹಿತರೇ ನಾಮಪತ್ರವನ್ನು ಸಲ್ಲಿಸಿದ್ದರು.

ಇತ್ತೀಚಿನ ಸುದ್ದಿ