ಎಮ್ಮೆ ಮೇಯಿಸುತ್ತಿದ್ದ ಬಾಲಕ ಹುಲಿಯ ದಾಳಿಗೆ ಬಲಿ
31/12/2020
ಭೋಪಾಲ್: 12 ವರ್ಷದ ಬಾಲಕನೋರ್ವನ ಮೇಲೆ ಹುಲಿ ದಾಳಿ ನಡೆಸಿ, ಕೊಂದು ಹಾಕಿರುವ ದಾರುಣ ಘಟನೆ ನಡೆದಿದ್ದು, ಎಮ್ಮೆ ಮೇಯಿಸಲು ಹೋಗಿದ್ದ ಬಾಲಕ ಹುಲಿಗೆ ಬಲಿಯಾಗಿದ್ದಾನೆ.
ಮಧ್ಯಪ್ರದೇಶದ ಸಿಯೋನಿ ಜಿಲ್ಲಾಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. 12 ವರ್ಷದ ಬಾಲಕ ಎಮ್ಮೆ ಮೇಯಿಸಲು ಖೈರಿ ಅರಣ್ಯಪ್ರದೇಶಕ್ಕೆ ತೆರಳಿದ್ದು, ಈ ಸಂದರ್ಭ ಹುಲಿ ದಾಳಿ ನಡೆಸಿ, ಬಾಲಕನನ್ನು ತಿಂದು ಹಾಕಿದೆ.
ನರಭಕ್ಷಕ ಹುಲಿಯ ಹಿನ್ನೆಲೆ ಇಲ್ಲಿನ ಜನರು ತೀವ್ರ ಆತಂಕಗೊಂಡಿದ್ದು, ನರಭಕ್ಷಕ ಹುಲಿಯನ್ನು ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ. ಇದೀಗ ಅರಣ್ಯ ಇಲಾಖೆ ಹುಲಿಗೆ ಬೋನು ಸಿದ್ಧಪಡಿಸಿದ್ದು, ಹುಲಿಯನ್ನು ಹಿಡಿಯಲು ಅರಣ್ಯದಲ್ಲಿ ಬೋನು ಇರಿಸಲಾಗಿದೆ.