ಬ್ರಾಹ್ಮಣ ಸಿಎಂ’ ಬಾಂಬ್: ಡ್ಯಾಮೇಜ್ ತಪ್ಪಿಸಲು 50 ಸಾವಿರ ವಾಟ್ಸಪ್ ಗ್ರೂಪ್ ಮಾಡಿದ ಬಿಜೆಪಿ

ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಸಜ್ಜಾಗುತ್ತಿರುವ ಬಿಜೆಪಿ,ಪಕ್ಷವು ಇದೀಗ ಬ್ರಾಹ್ಮಣ ಸಿಎಂ ಎಂಬ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಪದ ಮಾತಿನಿಂದಾಗಿರುವ ಡ್ಯಾಮೇಜ್ ಅನ್ನು ಸರಿಪಡಿಸಲು ಇದೀಗ ವಾಟ್ಸ್ ಅಪ್ ಗ್ರೂಪ್ ಮೊರೆ ಹೋಗಿದೆ.
ಸಂಘ ಪರಿವಾರವನ್ನು ಟೀಕಿಸುವ ಭರದಲ್ಲಿ ಬ್ರಾಹ್ಮಣರ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಡಿದ ಮಾತುಗಳು ಈಗ ಚರ್ಚೆಗೆ ಗ್ರಾಸವಾಗಿದ್ದು,ಹೆಚ್.ಡಿ ಕುಮಾರಸ್ವಾಮಿ ಅವರ `ಬ್ರಾಹ್ಮಣ ಸಿಎಂ’ ಹೇಳಿಕೆ ಹಾಗೂ ಇದರಿಂದೆದ್ದಿರುವ ವಿಪಕ್ಷ ನಾಯಕರ ವಾಗ್ದಾಳಿ, ಆರೋಪ ಪ್ರತ್ಯಾರೋಪಳಿಂದ ಕಮಲ ಪಾಳಯಕ್ಕೆ ಆಗುವ ಹಾನಿ ತಪ್ಪಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ವಿಪಕ್ಷ ನಾಯಕರ ಹೇಳಿಕೆಗಳಿಂದ ಪಕ್ಷಕ್ಕೆ ಆಗುವ ಹಾನಿ ತಡೆಯುವ ಸಲುವಾಗಿ ಬಿಜೆಪಿ ಜಾಲತಾಣಗಳ ಮೊರೆ ಹೋಗಿದೆ.
ಕೇಸರಿ ಪಡೆ ಬೂತ್ ಮಟ್ಟದಲ್ಲಿ ರಚಿಸಿರುವ 50 ಸಾವಿರ ವಾಟ್ಸಪ್ ಗ್ರೂಪ್ ಗಳಲ್ಲಿ (Whatsup Group) ವಿಪಕ್ಷ ನಾಯಕರ ಹೇಳಿಕೆ ಸುಳ್ಳೆಂದು ಬಿಂಬಿಸಲು ಅಭಿಯಾನ ಶುರು ಮಾಡಿದೆ.
ಮನೆಮನೆಗೂ ಮನವರಿಕೆ ಮಾಡಿಕೊಡಲು ಪೋಸ್ಟರ್ ಹಂಚಲು ಸೂಚನೆ ನೀಡಿದೆ ಎನ್ನಲಾಗುತ್ತಿದೆ. ಹೆಚ್‌ಡಿಕೆ, ಸಿದ್ದರಾಮಯ್ಯ ಡಿಕೆಶಿ ಸೇರಿ ಇತರ ನಾಯಕರ ಆರೋಪಗಳು ಎಲ್ಲವೂ ಸುಳ್ಳು ಎಂದು ಈ ಮೂಲಕ ಬಿಂಬಿಸಲು ಹೊರಟಿದೆ. ಜೊತೆಗೆ ಹೇಳಿಕೆ ಕೊಟ್ಟ ವಿಪಕ್ಷ ನಾಯಕರ ವಿರುದ್ಧ ಜನಾಭಿಪ್ರಾಯ ಸಂಗ್ರಹಕ್ಕೂ ಮುಂದಾಗಿದೆ. ಈ ಮೂಲಕ ಪಕ್ಷಕ್ಕೆ ಆಗುವ ಹಾನಿಯನ್ನು ತಡೆಯಲು ಮುಂದಾಗಿದೆ.
ಬಿಜೆಪಿ, ಗುಂಪುಗಾರಿಕೆ, ಲಂಚ, ಅಕ್ರಮ, ಜಾತೀಯತೆಗೆ ನೀರೆರೆಯುವುದು ಕಾಂಗ್ರೆಸ್‌ನ ಸಂಸ್ಕೃತಿ. ಇದು ಗಾಂಧಿ ಕುಟುಂಬ ನೆಟ್ಟ ಬೀಜ. ಇದನ್ನು ಬುಡ ಸಮೇತ ಕಿತ್ತೆಸೆದರೆ ಮಾತ್ರ ರಾಜ್ಯದಲ್ಲಿ ನೆಮ್ಮದಿ ಎಂದು ಟ್ವೀಟ್ ಮೂಲಕ ಬಿಜೆಪಿ ಟೀಕಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw