ನೆಲಕಚ್ಚಿದ ಬಿಜೆಪಿ | ರೈತರ ಆಕ್ರೋಶಕ್ಕೆ ಎರಡು ಮೇಯರ್ ಸ್ಥಾನಗಳನ್ನು ಕಳೆದುಕೊಂಡ ಬಿಜೆಪಿ - Mahanayaka

ನೆಲಕಚ್ಚಿದ ಬಿಜೆಪಿ | ರೈತರ ಆಕ್ರೋಶಕ್ಕೆ ಎರಡು ಮೇಯರ್ ಸ್ಥಾನಗಳನ್ನು ಕಳೆದುಕೊಂಡ ಬಿಜೆಪಿ

31/12/2020

ಚಂಡೀಗಡ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಯ ಪರಿಣಾಮ ಹರ್ಯಾಣ ಸ್ಥಳೀಯ ಸಂಸ್ಥೆ ಚುನಾವಣೆಯ ಮೇಲೆ ಬೀರಿದ್ದು,  ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ.

ಹರ್ಯಾಣದ ಸೋನಿಪರ್ ಹಾಗೂ ಅಂಬಾಲಾದ ನಗರಪಾಲಿಕೆ ಚುನಾವಣೆ ನಡೆದಿದ್ದು, ಎರಡೂ ಕಡೆ ಕೂಡ ಆಡಳಿತರೂಢ  ಪಕ್ಷ ಬಿಜೆಪಿ ನೆಲ ಕಚ್ಚಿದ್ದು, ಮೇಯರ್ ಸ್ಥಾನವನ್ನು ಕಳೆದುಕೊಂಡಿದೆ.

ಅಂಬಾಲ, ಪಂಚಕುಲಾ, ಸೋನಪತ್, ಧರುಹೇರಾ, ಸಂಪ್ಲಾ, ಉಕ್ಲಾನಾದಲ್ಲಿ ಭಾನುವಾರ ಮತದಾನ ನಡೆದಿತ್ತು. ಇದೀಗ ಕಾಂಗ್ರೆಸ್ 14 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದೆ.


Provided by

ಕೇಂದ್ರ ಸರ್ಕಾರ ತಂದಿರುವ ನೂತನ ಕೃಷಿ ದೇಶಾದ್ಯಂತ ಬಿಜೆಪಿಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆಗಳು ಕಂಡು ಬಂದಿದ್ದು, ಕಾಂಗ್ರೆಸ್ ಹಾಗೂ ಇತರ ಸ್ಥಳೀಯ ಪಕ್ಷಗಳತ್ತ ಜನರು ಮುಖಮಾಡುತ್ತಿರುವುದು ಕಂಡು ಬಂದಿದೆ. ಬಿಜೆಪಿ ಕಾರ್ಪೋರೇಟ್ ಕಂಪೆನಿಗಳ ಗುಲಾಮಗಿರಿ ಮಾಡುವಂತೆ ವರ್ತಿಸುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯ ದೇಶದಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಬಿಜೆಪಿ ಇಂತಹ ಜನ ವಿರೋಧಿ ಕಾಯ್ದೆಯನ್ನು ಜಾರಿ ಮಾಡಲು ಹಠ ಹಿಡಿದಿರುವುದು, ಕೇಡುಕಾಲದಲ್ಲಿ ವಿಪರೀತ ಬುದ್ಧಿ ಎಂಬಂತಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ