ಡಿ.ಕೆ.ಶಿವಕುಮಾರ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿಬಿಐ ಸಿದ್ಧತೆ
ಬೆಂಗಳೂರು: ಚುನಾವಣೆ ಹತ್ತಿರ ಆಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಕೇಂದ್ರ ತನಿಖಾ ಸಂಸ್ಥೆಗಳಿಂದ ತೊಂದರೆ ಎದುರಾಗಿದೆ. ಅಕ್ರಮ ಆಸ್ತಿ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ದೋಷಾರೋಪ ಪಟ್ಟಿ ತಯಾರು ಮಾಡಿದ್ದು,ಮಾರ್ಚ್ ಎರಡನೇ ವಾರದ ಒಳಗೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡೋ ಸಾಧ್ಯತೆಗಳು ಇದೆ.
ಈಗಾಗಲೇ ಸಿಬಿಐ ಅಧಿಕಾರಿಗಳು ಡಿಕೆಶಿಯ ಆಸ್ತಿ ಮೌಲ್ಯಮಾಪನ ಮಾಡಿದ್ದಾರೆ. ಡಿಕೆಶಿ ಐದು ವರ್ಷದಲ್ಲಿ 49%ರಷ್ಟು ಅಕ್ರಮ ಆಸ್ತಿ ಹೊಂದಿದ್ದಾರೆ. ಹಾಗೂ ತಮ್ಮ ಆದಾಯಕ್ಕಿಂತ 79 ಕೋಟಿ ಹೆಚ್ಚುವರಿ ಆಸ್ತಿ ಹೊಂದಿದ್ದಾರೆ ಅಂತ ಸಿಬಿಐ ಎಫ್ ಐಆರ್ ದಾಖಲು ಮಾಡಿತ್ತು.
ಪ್ರಕರಣ ವಿಚಾರಣೆಯಲ್ಲಿ ನಾನೊಬ್ಬ ಕೃಷಿಕ, ನಾನು ಕೃಷಿಯ ಮೂಲಕವೇ ಆಸ್ತಿ ಸಂಪಾದನೆ ಮಾಡಿದ್ದು, ಊರಲ್ಲಿ ನನ್ನದೇ ಆದ ತೋಟ ಇದೆ. ನಮಗೆ ಅದೇ ಆದಾಯದ ಮೂಲ ಅಂತ ಡಿಕೆಶಿ ಹೇಳಿದ್ರು. ಈಗ ಆ ಮೂಲದಿಂದಲೇ ಆಸ್ತಿ ಸಂಪಾದನೆ ಮಾಡಿದ್ದಾರಾ..? ಇಲ್ವಾ..? ಅನ್ನೋದು ಪತ್ತೆ ಮಾಡಿದ್ದಾರೆ.
ಇನ್ನು ಚುನಾವಣೆ ಬೆರಳೆಣಿಕೆಯಷ್ಟು ತಿಂಗಳುಗಳು ಬಾಕಿ ಉಳಿದಿದ್ದು, ಈ ಸಂದರ್ಭದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದಲ್ಲಿ ಡಿಕೆಶಿ ಜನರ ಮುಂದೆ ಹೇಗೆ ಚುನಾವಣೆ ಎದುರಿಸುತ್ತಾರೆ ಎನ್ನುವ ಕುತೂಹಲವೂ ಎದುರಾಗಿದೆ. ಸಿಬಿಐ ಮಾರ್ಚ್ ಎರಡನೇ ವಾರದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw