ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೆ 120 ಅಭ್ಯರ್ಥಿಗಳ ಪಟ್ಟಿ: ಯಾರಿಗೆ ಒಲಿಯಲಿದೆ ಕೈ ಟಿಕೆಟ್ - Mahanayaka
6:08 PM Thursday 12 - December 2024

ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೆ 120 ಅಭ್ಯರ್ಥಿಗಳ ಪಟ್ಟಿ: ಯಾರಿಗೆ ಒಲಿಯಲಿದೆ ಕೈ ಟಿಕೆಟ್

congress
11/02/2023

ಬೆಂಗಳೂರು: ರಾಜ್ಯದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ಅನುಮೋದನೆಗಾಗಿ ಹೈಕಮಾಂಡ್ ಅಂಗಳಕ್ಕೆ ಸುಮಾರು 120 ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಕಳಿಸಲಾಗಿದೆ.

ಪ್ರಥಮ ಕಂತಿನ ಪಟ್ಟಿಯಲ್ಲಿ ಬಹುತೇಕ ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ನಿರ್ಧಾರಕ್ಕೆ ಕೆಪಿಸಿಸಿ ಬಂದಿದೆ. ಚುನಾವಣೆಯಲ್ಲಿ ಗೆಲ್ಲಲು ಕಷ್ಟಕರ ಎನಿಸುವ ಬೆರಳೆಣಿಕೆಯ ಹಾಲಿ ಶಾಸಕರಿಗೆ ಮಾತ್ರ ಟಿಕೆಟ್ ನೀಡದೇ ಇರುವ ಬಗ್ಗೆಯೂ ಕಾಂಗ್ರೆಸ್​ನಲ್ಲಿ ಚಿಂತನೆ ನಡೆದಿದೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ಚುನಾವಣೆ ಅಭ್ಯರ್ಥಿಗಳ ಪರಿಶೀಲನಾ ಸಮಿತಿ ಸ್ಕ್ರೀನಿಂಗ್ ಕಮಿಟಿಯನ್ನು ಕಾಂಗ್ರೆಸ್ ಹೈಕಮಾಂಡ್ ರಚಿಸಿದ್ದು, ಪ್ರದೇಶ ಕಾಂಗ್ರೆಸ್ ಸಮಿತಿ ಸಲ್ಲಿಸಿದ್ದ ಪಟ್ಟಿಯಲ್ಲಿರುವ ಹೆಸರುಗಳ ಬಗ್ಗೆ ಪರಿಶೀಲನೆ ನಡೆಸಲಿದೆ.

ಕಾಂಗ್ರೆಸ್​ನ ಚುನಾವಣೆ ಸಮಿತಿ ಅಂತಿಮಗೊಳಿಸಿದ ಪಟ್ಟಿಯ ಬಗ್ಗೆ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿರುವ ಎಐಸಿಸಿ ಸಮಿತಿ ಸಭೆಯಲ್ಲಿ ಪರಿಶೀಲನೆ ಮಾಡಿ ಮೊದಲ ಹಂತದ ಪಟ್ಟಿ ಘೋಷಣೆಗೆ ಹಸಿರು ನಿಶಾನೆ ನೀಡಲಾಗುತ್ತದೆ. ಇದೇ ಫೆಬ್ರವರಿಯಲ್ಲಿಯೇ ಅಭ್ಯರ್ಥಿ ಪಟ್ಟಿ ಪ್ರಕಟಿಸಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಸಭೆ, ಸಮಾಲೋಚನೆಗಳು ಬಿರುಸಿನಿಂದ ಸಾಗಿವೆ.

ಮೊದಲ ಪಟ್ಟಿಯಲ್ಲಿ 60ಕ್ಕೂ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಿಗೆ ಒಬ್ಬರೇ ವ್ಯಕ್ತಿ ಹೆಸರನ್ನು ಕೆಪಿಸಿಸಿಯು ಎಐಸಿಸಿಯ ಸ್ಕ್ರೀನಿಂಗ್ ಕಮಿಟಿಗೆ ಶಿಫಾರಸ್ಸು ಮಾಡಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಪೈಪೋಟಿ ಇರುವ ಸುಮಾರು 60 ರಿಂದ 70 ಕ್ಷೇತ್ರಗಳಲ್ಲಿ ಎರಡರಿಂದ ಮೂರು ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಏಕ ಅಭ್ಯರ್ಥಿ ಮತ್ತು ಇಬ್ಬರು ಅಭ್ಯರ್ಥಿಗಳು ಇರುವ ಸುಮಾರು 120 ಕ್ಷೇತ್ರಗಳ ಪಟ್ಟಿಯನ್ನು ಅಂತಿಮಗೊಳಿಸಿ ಚುನಾವಣೆ ವೇಳಾಪಟ್ಟಿ ಪ್ರಕಟಿಸುವ ಮುನ್ನವೇ ಘೋಷಣೆ ಮಾಡಲಾಗುತ್ತದೆ. ಉಳಿದ 120ಕ್ಕೂ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ನಂತರದ ದಿನಗಳಲ್ಲಿ ಪ್ರಕಟ ಮಾಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.

ಒಂದೇ ಹೆಸರಿನ ಕ್ಷೇತ್ರಗಳ ಪಟ್ಟಿಯಲ್ಲಿ ಬಹುತೇಕ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರು ಸೇರಿದ್ದಾರೆಂದು ಹೇಳಲಾಗಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಾಜಿ ಸಚಿವ ರಾಮಲಿಂಗ ರೆಡ್ಡಿ, ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ,ಆರ್ ಧ್ರುವನಾರಾಯಣ, ಹಿರಿಯ ಮುಖಂಡರಾದ ಆರ್.ವಿ ದೇಶಪಾಂಡೆ, ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಪ್ರಣಾಲಿಕೆ ಅಧ್ಯಕ್ಷ ಡಾ. ಜಿ ಪರಮೇಶ್ವರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಹಿರಿಯ ಮುಖಂಡ ,ಎಚ್ ಕೆ ಪಾಟೀಲ್ ,ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ಕೃಷ್ಣ ಬೈರೇಗೌಡ ,ಡಾ. ಎಚ್ ಸಿ ಮಹದೇವಪ್ಪ, ಪ್ರಿಯಾಂಕ ಖರ್ಗೆ, ಯು.ಟಿ ಖಾದರ್, ಕೆ ಕೆ ಚಾರ್ಜ್ , ಬೈರತಿ ಸುರೇಶ್, ಶಾಮನೂರು ಶಿವಶಂಕರಪ್ಪ., ಶಿವಾನಂದ್ ಪಾಟೀಲ್ ,ಅಜಯ್ ಧರ್ಮಸಿಂಗ್ ಅವರ ಹೆಸರು ಮೊದಲ ಪಟ್ಟಿಯಲ್ಲಿದೆ ಎಂದು ಹೇಳಲಾಗುತ್ತದೆ.

ಅಂಜಲಿ ಹೇಮಂತ್ ನಿಂಬಾಳ್ಕರ್, ಆನಂದ್ ಸಿದ್ದು ನ್ಯಾಮಗೌಡ ,ಶರಣ ಬಸಪ್ಪ ದರ್ಶನಾಪುರ್, ರಾಜಶೇಖರ್ ಪಾಟೀಲ್, ಅಮರೇಗೌಡ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ್, ಅಬ್ಬಯ್ಯ ಪ್ರಸಾದ್ ,ಶ್ರೀನಿವಾಸ್ ಮಾನೆ , ಭೀಮ ನಾಯಕ್, ಬಿ ನಾಗೇಂದ್ರ, ಜೆಎನ್ ಗಣೇಶ್, ತುಕಾರಾಂ, ಟಿ ರಘುಮೂರ್ತಿ, ಬಿಕೆ ಸಂಗಮೇಶ್ವರ, ಡಾ. ಎಚ್ ಡಿ ರಂಗನಾಥ್, ಎನ್ ಹೆಚ್ ಶಿವಶಂಕರ್ ರೆಡ್ಡಿ, ಎಸ್ ಎನ್ ಸುಬ್ಬಾರೆಡ್ಡಿ, ವಿ ಮುನಿಯಪ್ಪ, ರೂಪಕಲಾ ಶಶಿಧರ್, ಹೆಚ್ ನಾಗೇಶ್, ಎಸ್ ಎನ್ ನಾರಾಯಣಸ್ವಾಮಿ ,ಅಖಂಡ ಶ್ರೀನಿವಾಸ್ ಮೂರ್ತಿ , ರಿಜ್ವಾನ್ ಅರ್ಷದ್, ಏನ್ ಎ ಹ್ಯಾರೀಸ್ , ಜಮೀರ್ ಅಹ್ಮದ್ , ಎಂ ಕೃಷ್ಣಪ್ಪ ,ಸೌಮ್ಯ ರೆಡ್ಡಿ, ಬಿ ಶಿವಣ್ಣ, ರಮಾನಾಥ್ ರೈ , ಎಚ್ ಪಿ ಮಂಜುನಾಥ್, ಅನಿಲ್ ಚಿಕ್ಕಮಾದು ತನ್ವೀರ್ ಸೇಠ್, ಡಾ.ಯತೀಂದ್ರಸಿದ್ರಾಮಯ್ಯ , ಮಧು ಬಂಗಾರಪ್ಪ ಸೇರಿದಂತೆ ಹಲವಾರು ಟಿಕೆಟ್ ಆಕಾಂಕ್ಷಿತರ ಹೆಸರುಗಳು ಮೊದಲ ಪಟ್ಟಿಯಲ್ಲಿ ಹೈಕಮಾಂಡ್ ಅನುಮೋದನೆ ದೊರೆತ ಬಳಿಕ ಘೋಷಣೆಯಾಗಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ