30 ಶಾಲಾ ಮಕ್ಕಳಿಗೆ ವೈರಲ್ ಫಿವರ್: ಜ್ವರ ನೆಗಡಿಯಿಂದ ಬಳಲುತ್ತಿರುವ ಮಕ್ಕಳು: ಶಾಲೆಗೆ ರಜೆ ಘೋಷಣೆ
ಚಾಮರಾಜನಗರ ಜಿಲ್ಲೆ: ಪ್ರೌಢಶಾಲಾ ಮಕ್ಕಳಿಗೆ ಸಾಮೂಹಿಕ ವೈರಲ್ ಫಿವರ್ ಕಾಣಿಸಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ ಮೇಗಲಹುಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಶಾಲೆಯ ಮೂವತ್ತು ಮಕ್ಕಳಿಗೆ ಜ್ವರ ಮತ್ತು ನೆಗಡಿ ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಶಾಲೆಗೆ 3 ದಿನಗಳ ಕಾಲ ರಜೆ ಘೋಷಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿರುವ ವೈದ್ಯಾಧಿಕಾರಿಗಳ ತಂಡ. ಪರಿಶೀಲನೆ ನಡೆಸಿದ್ದಾರೆ.
ಜ್ವರ, ನೆಗಡಿ ಕಾಣಿಸಿಕೊಂಡಿರುವ 21 ಮಕ್ಕಳಿಗೆ ಪಕ್ಕದ ಗ್ರಾಮದ ಪಣ್ಯದಹುಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 8, 9, 10ನೇ ತರಗತಿ ಓದುತ್ತಿರುವ 104 ಮಕ್ಕಳಲ್ಲಿ 30 ಮಕ್ಕಳಿಗೆ ಜ್ವರ ಮತ್ತು ನೆಗಡಿ ಕಾಣಿಸಿಕೊಂಡಿದೆ.
ಎಚ್ ಎಂ ಹಾಗೂ ಒಬ್ಬ ಶಿಕ್ಷಕರಿಗೂ ಜ್ವರ ಮತ್ತು ನೆಗಡಿ ಕಾಣಿಸಿಕೊಂಡಿದೆ. ಈ ನಡುವೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಹಬ್ಬಗಳು ಕೂಡ ನಡೆಯುತ್ತಿದ್ದು, ವೈರಲ್ ಫಿವರ್ ಸಾರ್ವಜನಿಕರಿಗೆ ಆತಂಕ ಸೃಷ್ಟಿ ಮಾಡಿದೆ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw