ತೆಂಗಿನ ಮರಕ್ಕೆ ಅಕ್ರಮ ವಿದ್ಯುತ್ ಸಂಪರ್ಕ: ಆಹಾರ ಅರಸಿ ಬಂದು ಒದ್ದಾಡಿದ ಕಾಡಾನೆ!!
ಚಾಮರಾಜನಗರ: ಬೆಳೆ ರಕ್ಷಣೆಗಾಗಿ ಹಾಕಲಾಗಿದ್ದ ಅಕ್ರಮ ವಿದ್ಯುತ್ ಸಂಪರ್ಕದಿಂದ ಆಹಾರ ಅರಸಿ ಬಂದ ಕಾಡಾನೆಯೊಂದು ಒದ್ದಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ನಡೆದಿದೆ.
ಪುತ್ತನಪುರರಾಜು ಎಂಬಾತ ಅಕ್ರಮ ವಿದ್ಯುತ್ ಹರಿಸಿದ್ದ ಆರೋಪಿ. ತೆಂಗಿನ ಮರದಿಂದ ತೆಂಗಿನ ಮರಕ್ಕೆ ಎರಡು ಅಡಿ ಎತ್ತರದಲ್ಲಿ ಜಮೀನು ಮಾಲೀಕ ಅಕ್ರಮವಾಗಿ ವಿದ್ಯುತ್ ಹರಿಸಿದ್ದಿರಿಂದ ಆಹಾರ ಅರಸಿ ಬಂದ 25 ವರ್ಷದ ಹೆಣ್ಣಾನೆ ಕರೆಂಟ್ ಶಾಕಿಗೆ ಒಳಗಾಗಿ ಒದ್ದಾಡಿದೆ.
ಮಾಹಿತಿ ಅರಿತ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿ ಚಿಕಿತ್ಸೆ ಕೊಟ್ಟ ಬಳಿಕ ಚೇತರಿಸಿಕೊಂಡು ಕಾಡಿಗೆ ಮತ್ತೇ ತೆರಳಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆರೋಪಿ ತಲೆಮರೆಸಿಕೊಂಡಿದ್ದಾನೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw