ಬಾಬರಿ ಮಸೀದಿ ಧ್ವಂಸಕ್ಕಾಗಿ ಸನ್ಮಾನ ಸ್ವೀಕರಿಸಿದ್ದ ಬಿಜೆಪಿ ಅಭ್ಯರ್ಥಿಗೆ ಸೋಲು! - Mahanayaka
10:10 AM Wednesday 15 - January 2025

ಬಾಬರಿ ಮಸೀದಿ ಧ್ವಂಸಕ್ಕಾಗಿ ಸನ್ಮಾನ ಸ್ವೀಕರಿಸಿದ್ದ ಬಿಜೆಪಿ ಅಭ್ಯರ್ಥಿಗೆ ಸೋಲು!

02/01/2021

ಉಚ್ಚಿಲ: ಗ್ರಾಮ ಪಂಚಾಯತಿಯ ಕಳೆದ ಮೂರು ಚುನಾವಣೆಗಳಲ್ಲಿ ಭರ್ಜರಿ ಜಯಭೇರಿಯೊಂದಿಗೆ ಸೋಲಿಲ್ಲದ ಸರದಾರ ಎಂಬಂತ್ತಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಈ ಬಾರಿ ಬಾಬರಿ ಮಸೀದಿ ಧ್ವಂಸದಲ್ಲಿ ಪಾಲ್ಗೊಂಡಿದ್ದಕ್ಕೆ ಮಾಡಿದ  ಸನ್ಮಾನವು ಸೋಲಿನ ರುಚಿ ತೋರಿಸಿದೆ.

ಉಡುಪಿ ಜಿಲ್ಲೆಯ ಉಚ್ಚಿಲ ಬಡಗ್ರಾಮ ಪೊಲ್ಯ ನಿವಾಸಿಯಾಗಿರುವ ವಸಂತ ದೇವಾಡಿಗ ಎಂಬವರು ಕಳೆದ ಮೂರು ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷದಿಂದ ಸ್ಪರ್ಧಿಸಿ ಭರ್ಜರಿ ಜಯದೊಂದಿಗೆ ವಿಜಯಿಯಾಗುತ್ತ ಸೋಲಿಲ್ಲದ ಸರದಾರ ಎಂದೇ ಪ್ರಖ್ಯಾತರಾಗಿದ್ದರು. ಮುಸ್ಲಿಂ ಬಾಹುಳ್ಯ ವಾರ್ಡ್ ನಿಂದ ಸ್ಪರ್ಧಿಸುತ್ತಿದ್ದ ಇವರಿಗೆ ಬಹುತೇಕ ಮುಸ್ಲಿಂ ಮಹಿಳೆಯರ ಮತವೇ ಲಭಿಸುತ್ತಿತ್ತು.


ADS

ಆದರೆ 1992 ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲು ಇವರೂ ಕೂಡ ಹೋಗಿ ಕರಸೇವೆ ಮಾಡಿದ್ದರು. ಇದಕ್ಕಾಗಿ ಇತ್ತೀಚೆಗೆ ಕೆಲವು ತಿಂಗಳ ಹಿಂದೆ ಇವರಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಸನ್ಮಾನ ಮಾಡಿದ್ದರು.

ಆದರೆ ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆಗೆ ಬೆರಳೆಣಿಕೆಯ ದಿನಗಳು ಬಾಕಿಯಿದ್ದ ಸಮಯದಲ್ಲಿ ಸನ್ಮಾನದ ಚಿತ್ರಗಳು ಅವರ ವಾರ್ಡ್ ನ  ಪ್ರತಿ ವಾಟ್ಸ್ಯಾಪ್ ಗ್ರೂಪ್ ನಲ್ಲಿ ಹರಿದಾಡಿದೆ. ಈ ಸನ್ಮಾನದ ಚಿತ್ರಗಳು ಎಷ್ಟು ಡ್ಯಾಮೇಜ್ ಮಾಡಿದೆ ಎಂದರೆ, ಈ ಫೊಟೊಗಳ ಮೂಲಕ ಇವರ ಇನ್ನೊಂದು ಮುಖವನ್ನು ನೋಡಿದ ಇವರ ಖಾಯಂ ಮುಸ್ಲಿಂ ಮಹಿಳಾ ಮತದಾರರು ಸಹಜವಾಗಿಯೇ ಇವರ ವಿರುದ್ಧ ಮತ ಚಲಾಯಿಸಿ ಸೋಲಿನ ರುಚಿ ತೋರಿಸಿದ್ದಾರೆ.

ಇದರೊಂದಿಗೆ ವಸಂತ ದೇವಾಡಿಗರವರ ಅಜೇಯ ನಾಗಾಲೋಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ.

ಅಭ್ಯರ್ಥಿಗಳು ಪಡೆದ ಮತಗಳು:

1) ಕಾಂಗ್ರೆಸ್ ಬೆಂಬಲಿತ: ಅಬ್ದುಲ್ ರಝಾಕ್ – 671 ಮತಗಳು

2) ಎಸ್ಡಿಪಿಐ ಬೆಂಬಲಿತೆ: ರುಮಾನ – 589 ಮತಗಳು

3) ಎಸ್ಡಿಪಿಐ ಬೆಂಬಲಿತ: ಮಜೀದ್ ಪೊಲ್ಯ – 576 ಮತಗಳು

4) ಕಾಂಗ್ರೆಸ್ ಬೆಂಬಲಿತೆ: ಲೀಲ – 566 ಮತಗಳು

 

ಸೋತ ಅಭ್ಯರ್ಥಿಗಳು ಪಡೆದ ಮತಗಳು:

5) ಬಿಜೆಪಿ ಬೆಂಬಲಿತ: ವಸಂತ ದೇವಾಡಿಗ – 378 ಮತಗಳು

6) ಬಿಜೆಪಿ ಬೆಂಬಲಿತ: ಮೈಯ್ಯದ್ದಿ – 306 ಮತಗಳು

7) ಸುಲೋಚನಿ – 298 ಮತಗಳು

8) ಮಾಲತಿ – 273 ಮತಗಳು

ಇತ್ತೀಚಿನ ಸುದ್ದಿ