ಪೊಲೀಸರಿಗೆ ಸವಾಲಾದ ಜ್ಯುವೆಲ್ಲರಿ ಸಿಬ್ಬಂದಿ ಬರ್ಬರ ಹತ್ಯೆ ಪ್ರಕರಣ! - Mahanayaka
3:05 PM Thursday 12 - December 2024

ಪೊಲೀಸರಿಗೆ ಸವಾಲಾದ ಜ್ಯುವೆಲ್ಲರಿ ಸಿಬ್ಬಂದಿ ಬರ್ಬರ ಹತ್ಯೆ ಪ್ರಕರಣ!

jewelery staff case
19/02/2023

ಮಂಗಳೂರು ನಗರದ ಬಲ್ಮಠ ಹಂಪನಕಟ್ಟೆ ರಸ್ತೆಯಲ್ಲಿರುವ ಮಂಗಳೂರು ಜ್ಯುವೆಲ್ಲರಿಗೆ ಹಾಡಹಗಲೇ ನುಗ್ಗಿ ಜ್ಯುವೆಲ್ಲರಿ ಸಿಬ್ಬಂದಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣ ನಡೆದು ಎರಡು ವಾರಗಳೆ ಕಳೆದರೂ ಆರೋಪಿಯ ಸುಳಿವು ಇನ್ನೂ ಸಿಕ್ಕಿಲ್ಲ. ಈ ಕೇಸ್ ಪೊಲೀಸರಿಗೆ ಸವಾಲಾಗಿಬಿಟ್ಟಿದೆ.

ಅಂದು ಮಾಲೀಕ ‌ಮಧ್ಯಾಹ್ನ ಊಟಕ್ಕೆ ಹೋಗಿದ್ದ ವೇಳೆ ಆಭರಣ ಮಳಿಗೆಗೆ ನುಗ್ಗಿದ್ದ ದುಷ್ಕರ್ಮಿಯು ಸಿಬ್ಬಂದಿ ರಾಘವೇಂದ್ರ ಆಚಾರ್ಯ (54) ಎಂಬುವವರನ್ನು ಇರಿದು ಕೊಂದು ಚಿನ್ನಾಭರಣದೊಂದಿಗೆ ಎಸ್ಕೇಪ್ ಆಗಿದ್ದ.

ಆರೋಪಿಯ ಸುಳಿವು ಸಿಗದ ಹಿನ್ನಲೆಯಲ್ಲಿ ಸಿಸಿಟಿವಿಯಲ್ಲಿ ದಾಖಲಾದ ಭಾವಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿ ಮಾಹಿತಿ ದೊರೆತಲ್ಲಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿದ್ದರು.

ಇನ್ನೊಂದೆಡೆ ಪೊಲೀಸರು ಆರೋಪಿಯ ಪತ್ತೆಗೆ ಕಾಸರಗೋಡಿನಲ್ಲಿಯೂ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಮಂಗಳೂರು ಪೊಲೀಸರಿಗೆ ಇದೊಂದು ಕೇಸ್ ಸವಾಲಾಗಿಬಿಟ್ಟಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ