ಪಾದಯಾತ್ರೆಗೆ ತೆರಳಿದ್ದ ಯುವಕ ನಾಪತ್ತೆ: ಯುವಕನ ಮಾಹಿತಿ ನೀಡಿದರೆ 5 ಸಾವಿರ ರೂ. ಬಹುಮಾನ - Mahanayaka

ಪಾದಯಾತ್ರೆಗೆ ತೆರಳಿದ್ದ ಯುವಕ ನಾಪತ್ತೆ: ಯುವಕನ ಮಾಹಿತಿ ನೀಡಿದರೆ 5 ಸಾವಿರ ರೂ. ಬಹುಮಾನ

lava
19/02/2023

ಚಿಕ್ಕಮಗಳೂರು: ಪಾದಯಾತ್ರೆಗೆ ತೆರಳಿದ್ದ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ತಿಮ್ಲಾಪುರ ಗ್ರಾಮದ ಯುವಕ ನಾಪತ್ತೆಯಾದ ಘಟನೆ ನಡೆದಿದೆ.

22 ವರ್ಷ ವಯಸ್ಸಿನ ಲವ ಎಂಬ ಹೆಸರಿನ ಯುವಕ ಪಾದ ಯಾತ್ರೆಗೆಂದು ಸುಮಾರು 50 ಜನರ ಜೊತೆಗೆ ಆಗಮಿಸಿದ್ದ ಬುದ್ಧಿಮಾಂದ್ಯನಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ಯುವಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಯುವಕಸ್ವಲ್ಪ  ಬುದ್ಧಿಮಾಂದ್ಯನಾಗಿದ್ದು, ಈತನ ನಾಪತ್ತೆಯಿಂದಾಗಿ ಆತನ ತಂದೆ ತೀವ್ರವಾಗಿ ಆತಂಕಕ್ಕೊಳಗಾಗಿದ್ದಾರೆ. ಮಗನನ್ನು ಪತ್ತೆ ಹಚ್ಚಿ ಕೊಟ್ಟವರಿಗೆ 5 ಸಾವಿರ ರೂ. ಬಹುಮಾನ ಕೊಡುತ್ತೇನೆ. ಮಾಹಿತಿ ಸಿಕ್ಕಿದರೆ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ