ಸಿಕ್ಕಿದಲ್ಲೆಲ್ಲ ಚಿನ್ನ ಇಟ್ಕೊಂಡು ಬಂದರೂ ಸಿಕ್ಕಿ ಬಿದ್ದರು: ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಐವರು ಕಸ್ಟಮ್ಸ್ ಅಧಿಕಾರಿಗಳ ಬಲೆಗೆ - Mahanayaka
1:14 AM Wednesday 11 - December 2024

ಸಿಕ್ಕಿದಲ್ಲೆಲ್ಲ ಚಿನ್ನ ಇಟ್ಕೊಂಡು ಬಂದರೂ ಸಿಕ್ಕಿ ಬಿದ್ದರು: ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಐವರು ಕಸ್ಟಮ್ಸ್ ಅಧಿಕಾರಿಗಳ ಬಲೆಗೆ

gold
20/02/2023

ಕಸ್ಟಮ್ಸ್ ಅಧಿಕಾರಿಗಳು 1 ಕೆ.ಜಿ. 625 ಗ್ರಾಂ ಚಿನ್ನ ವಶಕ್ಕೆ ಪಡೆದ ಘಟನೆ ಮಂಗಳೂರು ಏರ್ ಪೋರ್ಟ್ ನಲ್ಲಿ  ನಡೆದಿದೆ.

ಫೆಬ್ರವರಿ 1ರಿಂದ 15ರವರೆಗೆ ನಡೆಸಿದ ಕಾರ್ಯಾಚರಣೆಗಳಲ್ಲಿ ಅಧಿಕಾರಿಗಳು  ದುಬೈ ಮತ್ತು ಬಹ್ರೇನ್ ನಿಂದ ಆಗಮಿಸಿದ ಐವರು ಪುರುಷ ಪ್ರಯಾಣಿಕರಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಈ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ವಶಪಡಿಸಿಕೊಳ್ಳಲಾದ ಚಿನ್ನದ ಮಾರುಕಟ್ಟೆ ಮೌಲ್ಯ 91 ಲಕ್ಷದ 35 ಸಾವಿರದ 850 ರೂಪಾಯಿ ಆಗಿದೆ. ಚಿನ್ನ ಮಾತ್ರವಲ್ಲದೇ ಭಾರತೀಯ ರೂಪಾಯಿ 6 ಲಕ್ಷದ 54 ಸಾವಿರದ 750 ರೂಪಾಯಿ ಮೌಲ್ಯದ ವಿದೇಶಿ ನೋಟುಗಳನ್ನು ಓರ್ವ ಪ್ರಯಾಣಿಕನಿಂದ ವಶಕ್ಕೆ ಪಡೆಯಲಾಗಿದೆ.

ಚಿನ್ನವನ್ನು ಪೇಸ್ಟ್ ರೂಪದಲ್ಲಿ ಘನ ಗಮ್‌ ನೊಂದಿಗೆ ಬೆರೆಸಿ ಅಂಡಾಕಾರದ ಪ್ಯಾಕೆಟ್‌ ಗಳಾಗಿ ಮಾಡಿ ಗುದನಾಳದಲ್ಲಿ ಮರೆಮಾಚಿ, ಟ್ರಾಲಿ ಬ್ಯಾಗ್ ನ ಹ್ಯಾಂಡಲ್ ನಲ್ಲಿ ಮರೆಮಾಚಿದ್ದು, ರಟ್ಟಿನ ಪೆಟ್ಟಿಗೆಯಲ್ಲಿ ಪೇಸ್ಟ್ ರೂಪದಲ್ಲಿ ಮರೆಮಾಚಿದ್ದು ಸೇರಿ ವಿವಿಧ ರೂಪದಲ್ಲಿ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ