ವಿದ್ಯುತ್, ಹಣ, ಅಕ್ಕಿ ಬಳಿಕ  ಟಿವಿ ಬಹುಮಾನ ಘೋಷಿಸಿದ ಡಿ‌‌.ಕೆ.ಶಿವಕುಮಾರ್ - Mahanayaka
7:31 AM Thursday 12 - December 2024

ವಿದ್ಯುತ್, ಹಣ, ಅಕ್ಕಿ ಬಳಿಕ  ಟಿವಿ ಬಹುಮಾನ ಘೋಷಿಸಿದ ಡಿ‌‌.ಕೆ.ಶಿವಕುಮಾರ್

dk shivakumar
21/02/2023

ಚಾಮರಾಜನಗರ: 200 ಯೂನಿಟ್ ಉಚಿತ ವಿದ್ಯುತ್, 2 ಸಾವಿರ ರೂ‌. ಹಣ ಎಂಬ ಕಾಂಗ್ರೆಸ್ ಯೋಜನೆ ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಟಿವಿ ಉಡುಗೊರೆ ಘೋಷಿಸಿದ್ದಾರೆ.

ಹನೂರಿನಲ್ಲಿ ಪ್ರಜಾಧ್ವನಿ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿ, ಕಾಂಗ್ರೆಸ್ ನ ವಚನವಾದ ಉಚಿತ ವಿದ್ಯುತ್, 2 ಸಾವಿರ ರೂ. ಹಣ, 10 ಕೆ.ಜಿ. ಉಚಿತ ಅಕ್ಕಿ ಗ್ಯಾರಂಟಿ ಚೆಕ್ ನ್ನು ಪ್ರತಿ ಮನೆ ಬಾಗಿಲಿಗೆ ತಲುಪಿಸ ಬೇಕು, ತಾಲೂಕಿನಲ್ಲಿ ಅತಿ ಹೆಚ್ಚು ರಿಜಿಸ್ಟರ್ ಮಾಡಿದ 10 ಮಂದಿಗೆ ಡಿಕೆಶಿ ಕಡೆಯಿಂದ ಬೊಂಬಾಟ್ ಟಿವಿ ಗಿಫ್ಟ್ ಮಾಡುತ್ತೇನೆ ಎಂದರು.

ಪಕ್ಷ ಯಾವುದೇ ಇರಲಿ, ಎಲ್ಲರ  ಮನೆ ಬಾಗಿಲಿಗೆ ತೆರಳಿ ಕಾಂಗ್ರೆಸ್ ಪ್ರಣಾಳಿಕೆಯನ್ನು ತಿಳಿಸಬೇಕು, ಪ್ರತಿ ಗ್ರಾಪಂನಲ್ಲಿ ಅತಿಹೆಚ್ಚು ಜನರಿಗೆ 10 ಮಂದಿ ಕಾರ್ಯಕರ್ತರಿಗೆ ನಾನು ಟಿವಿ ಕೊಡುತ್ತೇನೆ ಎಂದು ಘೋಷಿಸಿದರು.

ದುಡ್ಡು ಇಸ್ಕೊಳಿ-ಓಟ್ ಕಾಂಗ್ರೆಸ್ ಗೆ ಹಾಕಿ:

ಹೊರಗಿನಿಂದ ಬಂದ ಕೆಲವರು ಕ್ಷೇತ್ರದ ಜನರಿಗೆ ಹಣ ಮತ್ತಿತ್ತರ ಆಮೀಷ ತೋರಿಸುತ್ತಿದ್ದಾರೆ ಎಂದು ಶಾಸಕ ನರೇಂದ್ರ ಹೇಳಿದ್ದಾರೆ. ನಾನು ನಿಮಗೆ ಹೇಳುವುದು ಇಷ್ಟೇ, ಬಿಜೆಪಿ ಅವರಾಗಲಿ, ಜೆಡಿಎಸ್ ನವರಾಗಲಿ ಮತ್ತೊಬ್ಬರಾಗಲಿ ದುಡ್ಡು ಕೊಟ್ಟರೇ ಇಸ್ಕೊಳಿ ಓಟ್ ಮಾತ್ರ ಕಾಂಗ್ರೆಸ್ ಗೆ ಹಾಕಿ ಎಂದು ಜನರಿಗೆ ಕರೆ ಕೊಟ್ಟರು.

ಈಗಾಗಲೇ 200 ಯೂನಿಟ್ ಉಚಿತ ವಿದ್ಯುತ್, ಮನೆ ಯಜಮಾನಿಗೆ 2000 ಸಾವಿರ ರೂ‌. ಹಣ ಘೋಷಿಸಿದ್ದು 10 ಕೆಜಿ ಉಚಿತ ಅಕ್ಕಿಯನ್ನು ಅಧಿಕೃತವಾಗಿ ಘೋಷಿಸುತ್ತೇವೆ, ನಾವು ಏನದಾರೂ ನಮ್ಮ ಭರವಸೆ ಈಡೇರಿಸದಿದ್ದರೇ ಇನ್ಮುಂದೆ ನಾವು ಮತ ಕೇಳಲು ಬರುವುದಿಲ್ಲ ಎಂದು ಘೋಷಿಸಿದರು.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ