ಬಿಡಿಎ ಕಾರ್ಯಾಚರಣೆ: ಹೆಚ್.ಎಸ್.ಆರ್ ಬಡಾವಣೆಯ ಸೆಕ್ಟರ್–1 ರಲ್ಲಿ ಆಸ್ತಿ ವಶ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಇಂದು ಪ್ರಾಧಿಕಾರದ ಆಯುಕ್ತರಾದ ಕುಮಾರ ನಾಯಕ, ಭಾ.ಆ.ಸೇ., ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೆಚ್.ಎಸ್.ಆರ್ ಒಂದನೇ ಸೆಕ್ಟರ್ ಬಡಾವಣೆಯಲ್ಲಿ ಸುಮಾರು ರೂ. 20 ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿದೆ.
ಅಗರ ಗ್ರಾಮದ ಸರ್ವೆ ನಂ. 74, ಹೆಚ್.ಎಸ್.ಆರ್ ಒಂದನೇ ಸೆಕ್ಟರ್ ನಲ್ಲಿ ತಲೆ ಎತ್ತಿದ್ದ ಅನಧಿಕೃತ ಶೆಡ್ಗಳನ್ನು ತೆರವುಗೊಳಿಸಿ, ಪ್ರಾಧಿಕಾರಕ್ಕೆ ಸೇರಿದ 15 ಗುಂಟೆ ಪ್ರದೇಶದ ಸುಮಾರು ರೂ. 20 ಕೋಟಿ ಆಸ್ತಿಯನ್ನು ಪ್ರಾಧಿಕಾರವು ತನ್ನ ವಶಕ್ಕೆ ತೆಗೆದುಕೊಂಡಿತು.
ಈ ಕಾರ್ಯಾಚರಣೆಯನ್ನು ಕುಮಾರ ನಾಯಕ, ಭಾ.ಆ.ಸೇ., ಆಯುಕ್ತರು ಇವರ ನೇತೃತ್ವದೊಂದಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರಾದ ನಂಜುಂಡೇಗೌಡ ಹಾಗೂ ಮಹದೇವ ಗೌಡ, ಕಾರ್ಯಪಾಲಕ ಅಭಿಯಂತರರು, ಪೂರ್ವ ವಿಭಾಗ ಬಿ.ಡಿ.ಎ. ಇವರುಗಳನ್ನು ಒಳಗೊಂಡಂತೆ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನೆರವೇರಿಸಲಾಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw