ಪ್ರಾಣ ಕಳೆದುಕೊಳ್ಳಲು ಬಂದಿದ್ದ ಅಪರಿಚಿತ ಮಹಿಳೆಯ ರಕ್ಷಣೆ!
ಉಡುಪಿ: ಪ್ರಾಣ ಕಳೆದುಕೊಳ್ಳಲು ಬಂದ ಅಪರಿಚಿತ ಮಹಿಳೆಯನ್ನು ಇಂದ್ರಾಳಿಯ ರೈಲುನಿಲ್ದಾಣದಲ್ಲಿ ರೈಲ್ವೆ ಪೋಲಿಸರು ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ರಕ್ಷಿಸಿರುವ ಘಟನೆ ಶನಿವಾರ ನಡೆದಿದೆ.
ಬಳಿಕ ಮಹಿಳೆಯನ್ನು ಬೈಲೂರಿನ ಹೊಸ ಬೆಳಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಲಾಗಿದೆ. ರಕ್ಷಿಸಲ್ಪಟ್ಟ ಮಹಿಳೆಯನ್ನು ಸವಿತಾ (32) ತಂದೆ ಗಂಗಣ್ಣ, ಗೆದ್ಲಹಳ್ಳಿಯ ನಿವಾಸಿಯೆಂದು ತಿಳಿದುಬಂದಿದೆ.
ಸಂಬಂಧಿಕರು ಕಾರ್ಕಳ ಬೈಲೂರಿನ ಹೊಸಬೆಳಕು ಆಶ್ರಮವನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಕಾರ್ಯಚರಣೆಯಲ್ಲಿ ಪಿ.ವಿ.ಮಧುಸೂದನ್ ಇನ್ಸ್ಪೆಕ್ಟರ್, ಕಾನ್ಸ್ಟೇಬಲ್ ಜೀನಾ ಪಿಂಟೋ, ಆಶ್ರಮ ಸಂಚಾಲಕಿ ತನುಲಾ ತರುಣ್ ಭಾಗಿಯಾಗಿದ್ದರು.
ರಕ್ಷಿಸಲ್ಪಟ್ಟ ಮಹಿಳೆಯು ಮಾನಸಿಕವಾಗಿ ನೊಂದಿದ್ದು, ಜೀವನದಲ್ಲಿ ಎದುರಾದ ಕೌಟುಂಬಿಕ ಸಮಸ್ಯೆಗಳು ಎದುರಿಸಲಾಗಿದೆ ಪ್ರಾಣ ಕಳೆದುಕೊಳ್ಳಲು ಬಂದಿರುವುದಾಗಿ ಹೇಳಿಕೊಂಡಿದ್ದಾಳೆ. ರೈಲು ನಿಲ್ದಾಣದಲ್ಲಿ ಮಹಿಳೆಯ ನಡವಳಿಕೆಯಲ್ಲಿ ಸಂಶಯ ಪಟ್ಟ ಕರ್ತವ್ಯನಿರತ ಪೋಲಿಸರು ವಿಚಾರಿಸಿದಾಗ ವಿಷಯ ತಿಳಿದುಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw