ಬಂಟ್ವಾಳ: ಗ್ರಾಮ ಪಂಚಾಯತ್ ಉಪ ಚುನಾವಣೆ ಫಲಿತಾಂಶ ಪ್ರಕಟ - Mahanayaka

ಬಂಟ್ವಾಳ: ಗ್ರಾಮ ಪಂಚಾಯತ್ ಉಪ ಚುನಾವಣೆ ಫಲಿತಾಂಶ ಪ್ರಕಟ

grama punchayath
28/02/2023

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನಂತಾಡಿ ಮತ್ತು ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ನ ತಲಾ ಒಂದು ಸ್ಥಾನಗಳಿಗೆ ಫೆಬ್ರವರಿ 25 ರಂದು ನಡೆದ ಉಪ ಚುನಾವಣೆಯ ಮತ ಎಣಿಕೆ ಬಂಟ್ವಾಳ ಆಡಳಿತ ಸೌಧದಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿತು.


Provided by

ಅನಂತಾಡಿ ಗ್ರಾಮ ಪಂಚಾಯತ್ ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಶಿಕಲಾ ಹಾಗೂ  ನೆಟ್ಲ ಮುಡ್ನೂರು ಪಂಚಾಯತ್ ನ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಜಾತ ಗೆಲುವು ಸಾಧಿಸಿದ್ದಾರೆ.

ಅನಂತಾಡಿ ಗ್ರಾಮ ಪಂಚಾಯತ್ ನ ಒಟ್ಟು 667 ಮತದಾರರ ಪೈಕಿ 500 ಮಂದಿ ಮತ ಚಲಾಯಿಸಿದ್ದರು. ಈ ಪೈಕಿ ಶಶಿಕಲಾ (ಕಾಂಗ್ರೆಸ್) 254, ಗೀತಾ ಚಂದ್ರ ಶೇಖರ್ (ಬಿಜೆಪಿ) 242 ಮತಗಳನ್ನು ಪಡೆದಿದ್ದಾರೆ.


Provided by

4 ಮತಗಳು ತಿರಸ್ಕೃತಗೊಂಡಿದೆ. ಕಳೆದ ಬಾರಿ ಬಿಜೆಪಿ ತೆಕ್ಕೆಯಲ್ಲಿದ್ದ ಈ ಸ್ಥಾನವನ್ನು 12 ಮತ ಅಂತರದಲ್ಲಿ  ಕಾಂಗ್ರೆಸ್ ಕೈವಶ ಮಾಡಿಕೊಂಡಿದೆ. ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ನ  ಒಟ್ಟು 816 ಮತದಾರರ ಪೈಕಿ 596 ಮಂದಿ ಮತ ಚಲಾಯಿಸಿದ್ದರು.

ಈ ಪೈಕಿ ಸುಜಾತ ಜಗದೀಶ ಪೂಜಾರಿ (ಬಿಜೆಪಿ) 353, ಹರಿಣಾಕ್ಷಿ (ಕಾಂಗ್ರೆಸ್) 239 ಮತಗಳನ್ನು ಪಡೆದಿದ್ದಾರೆ. 4 ಮತಗಳು ತಿರಸ್ಕೃತಗೊಂಡಿದೆ. ಕಳೆದ ಬಾರಿ ಬಿಜೆಪಿ ತೆಕ್ಕೆಯಲ್ಲಿದ್ದ ಈ ಸ್ಥಾನವನ್ನು 114 ಮತ ಅಂತರದಲ್ಲಿ ಮತ್ತೆ ಬಿಜೆಪಿ ಉಳಿಸಿಕೊಂಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ