ಪಠ್ಯದಿಂದ ನಾರಾಯಣ ಗುರು ಪಠ್ಯ ತೆಗೆದು ಹಾಕುವಲ್ಲಿ ಶಾಸಕ ಹರೀಶ್ ಪೂಂಜ ಪಾತ್ರವಿದೆ: ವಸಂತ ಬಂಗೇರ ಆರೋಪ - Mahanayaka
12:22 AM Thursday 12 - December 2024

ಪಠ್ಯದಿಂದ ನಾರಾಯಣ ಗುರು ಪಠ್ಯ ತೆಗೆದು ಹಾಕುವಲ್ಲಿ ಶಾಸಕ ಹರೀಶ್ ಪೂಂಜ ಪಾತ್ರವಿದೆ: ವಸಂತ ಬಂಗೇರ ಆರೋಪ

vasanth bangera
01/03/2023

ಬೆಳ್ತಂಗಡಿ; ನಾರಾಯಣ ಗುರುಗಳ ಪಠ್ಯವನ್ನು ಪಠ್ಯಪುಸ್ತಕದಿಂದ ತೆಗೆದು ಹಾಕುವಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಮಹತ್ವದ ಪಾತ್ರವಿದೆ ಎಂಬುದು ವೇಣೂರಿನಲ್ಲಿ ರೋಹಿತ್ ಚಕ್ರತೀರ್ಥ ನೀಡಿರುವ ಹೇಳಿಕೆಯಿಂದ ಸ್ಪಷ್ಡವಾಗಿದ್ದು ಶಾಸಕರ ಈ ನಡೆಯನ್ನು  ಗುರುನಾರಾಯಣ ಸ್ವಾಮಿ ಸೇವಾ ಸಂಘ  ತೀವ್ರವಾಗಿ ಖಂಡಿಸುತ್ತಿದ್ದು, ಶಾಸಕರು ರಾಜ್ಯದ ಜನತೆಯ  ಕ್ಷಮೆ ಯಾಚಿಸಬೇಕು ಎಂದು ಮಾಜಿ ಶಾಸಕ ಗುರುನಾರಾಯಣ ಸ್ವಾಮಿ ಸೇವಾಸಂಘದ ಗೌರವ ಅಧ್ಯಕ್ಷ ವಸಂತ ಬಂಗೇರ ಹೇಳಿದರು.

ಬೆಳ್ತಂಗಡಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಶಾಸಕರು ಹಠ ಮಾಡಿ ರೋಹಿತ್ ಚಕ್ರತೀರ್ಥ ಅವರನ್ನು ವೇಣೂರಿಗೆ ಕರೆಸಿರುವುದು ಸ್ಪಷ್ಟವಾಗಿದೆ. ಅಳದಂಗಡಿ ಅರಸರಾದ ಡಾ.ಪದ್ಮಪ್ರಸಾದ ಅಜಿಲರ ನೇತೃತ್ವದಲ್ಲಿ ವಿವಾದಗಳನ್ನು ಪರಿಹರಿಸಲಾಗಿತ್ತು, ರೋಹಿತ್ ಚಕ್ರತೀರ್ಥ ಅವರ ಉಪನ್ಯಾಸವನ್ನು ರದ್ದುಗೊಳಿಸಲಾಗಿತ್ತು. ಇದಕ್ಕಾಗಿ ಡಾ.ಪದ್ಮಪ್ರಸಾದ ಅಜಿಲ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಆದರೆ ಶಾಸಕರು ಉದ್ದೇಶಪೂರ್ವಕವಾಗಿ ಅವರನ್ನು ವೇಣೂರಿಗೆ ಕರೆಸಿ ಮಾದ್ಯಮದವರೊಂದಿಗೆ ಮಾತನಾಡಿಸಿದ್ದಾರೆ ಎಂದು ಅವರು ಆರೋಪಿಸಿದರು.

ರೋಹಿತ್ ಚಕ್ರತೀರ್ಥ ಅವರು ಮಾತನಾಡುತ್ತಾ “ಪಠ್ಯ ಪುಸ್ತಕ ರಚನೆಯ ಅಥವಾ ಪರಿಷ್ಕರಣೆಯ ಸಂದರ್ಭದಲ್ಲಿ ನಡೆದ ಅನೇಕ ಘಟನಾವಳಿಗಳಲ್ಲಿ ನನ್ನ ಜೊತೆ ಬಲವಾಗಿ ನಿಂತದ್ದು ಹರೀಶ್ ಪೂಂಜ ಅವರಾಗಿದ್ದಾರೆ” ಎಂದು ಹೇಳಿದ್ದಾರೆ. ಇದನ್ನು ಗಮನಿಸಿದಾಗ ‌ನಾರಾಯಣ ಗುರುಗಳ ವಿಚಾರ ಸೇರಿದಂತೆ ಹಲವರು ದಾರ್ಶನಿಕರ ವಿಚಾರಗಳನ್ನು ಪಠ್ಯಪುಸ್ತಕದಿಂದ ಕೈಬಿಡುವಲ್ಲಿ ಹರೀಶ್ ಪೂಂಜ ಅವರ ಪಾತ್ರವೂ ಇರುವುದು ಸ್ಪಷ್ಟವಾಗುತ್ತಿದೆ. ಇದೀಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ನಿಜ ಬಣ್ಣ ಬಯಲಾಗಿದೆ ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು  ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ಪಿತಾಂಬರ ಹೆರಾಜೆ, ಭಗೀರಥ ಜಿ, ಜಯರಾಂ ಬಂಗೇರ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಜಿತಾ ಬಂಗೇರ, ಶೇಖರ ಬಂಗೇರ, ಗೋಪಾಲ ಪೂಜಾರಿ, ಜಯವಿಕ್ರಮ, ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ