ಬಂದರೆ ಜೊತೆಯಾಗಿ ಹೋಗುತ್ತೇವೆ, ಬರದಿದ್ದವರನ್ನು ಬಿಟ್ಟು ಹೋಗುತ್ತೇವೆ: ಸಚಿವೆ ಶೋಭಾ ಕರಂದ್ಲಾಜೆ
ಚಾಮರಾಜನಗರ: ಪಾರ್ಟಿ ಅನ್ನುವುದು ಸಮುದ್ರ ಇದ್ದಂತೆ ಇಲ್ಲಿ ಎಲ್ಲರೂ ಬೇಕು, ನಮ್ಮ ಜೊತೆ ಬಂದರೆ ಜೊತೆಯಾಗಿ ಹೋಗುತ್ತೇವೆ ಬರದಿದ್ದವರನ್ನು ಬಿಟ್ಟು ಹೋಗುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪಕ್ಷಕ್ಕೆ ಅವರು ಬೇಕು- ಇವರು ಬೇಕು ಅಂಥಲ್ಲಾ, ಎಲ್ಲರೂ ಬೇಕು, ಜೊತೆಯಾಗಿ ಬಂದರೆ ಜೊತೆಯಾಗಿ ಹೋಗುತ್ತೇವೆ, ಬರಲಿಲ್ಲವೆಂದರೇ ಬಿಟ್ಟು ಹೋಗುತ್ತೇವೆ ಎಂದು ಕೊಳ್ಳೇಗಾಲದಲ್ಲಿ ಟಿಕೆಟ್ ಆಕಾಂಕ್ಷಿ ಜಿ.ಎನ್.ನಂಜುಂಡಸ್ವಾಮಿ ಗೈರಾದ ಬಗ್ಗೆ ಕೇಳಿದ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟರು.
ಸಂಸದ ವಿ.ಶ್ರೀನಿವಾಸಪ್ರಸಾದ್ ಅನಾರೋಗ್ಯದ ಕಾರಣ ಮಣಿಪಾಲ್ ಆಸ್ಪತ್ರೆಯಲ್ಲಿರುವುದರಿಂದ ಸಂಕಲ್ಪ ಯಾತ್ರೆಗೆ ಬರಲಿಲ್ಲ, ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರಿಗೂ ಸಣ್ಣ ಆರೋಗ್ಯ ತೊಂದರೆ ಕಾಣಿಸಿಕೊಂಡಿದೆ ಎಂದು ಕರೆ ಮಾಡಿ ತಿಳಿಸಿದ್ದಾರೆ ಎಂದು ಸೋಮಣ್ಣ ಗೈರಾದದ್ದಕ್ಕೆ ಸ್ಪಷ್ಟನೆ ಕೊಟ್ಟರು.
ಅರಿಶಿಣದ ಬೆಲೆ ಪಾತಾಳಕ್ಕೆ ಕುಸಿತ ಕಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ಅಧಿಕಾರಿಗಳನ್ನು ಚಾಮರಾಜನಗರಕ್ಕೆ ಕರೆತಂದು ಅರಿಶಿಣ ಉತ್ಪನ್ನ ತಯಾರಿಕೆ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟರು.
ನನಗೆ ನಾಯಕರ ಆಶೀರ್ವಾದ ಇದೆ: ಯಡಿಯೂರಪ್ಪ ಸೇರಿದಂತೆ ಇನ್ನಿತರ ನಾಯಕರು ಆಶೀರ್ವಾದ ಮಾಡಿದ್ದಾರೆ, ನನಗೆ ಟಿಕೆಟ್ ಫೈನಲ್ ಎನ್ನುವಂತೆ ಬಿಎಸ್ವೈ ಆಶೀರ್ವಾದ ಮಾಡಿದ್ದಾರೆ, ಕೊಳ್ಳೇಗಾಲದಲ್ಲಿ ಬಿಜೆಪಿ ಮತ್ತೇ ಗೆಲ್ಲಲ್ಲಿದ್ದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ಪೋಸ್ಟರ್ ಗಳಿಗೆ ಸಗಣಿ ಎರೆಚಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪಮಾನ ಮಾಡುವ ಪೋಸ್ಟ್ ಗಳ ಸಂಬಂಧ ಉತ್ತರಿಸಿ, ನೆಗೆಟಿವ್ ಫೋರ್ಸ್ ಗಳನ್ನು ಎದುರಿಸಿಕೊಂಡೇ ನಾನು ಬಂದಿರುವುದು, ಧ್ವೇಷದಿಂದ ಮಾತನಾಡುವವರು ಬಹಳ ಬೇಗ ಸುಸ್ತಾಗಿಬಿಡುತ್ತಾರೆ, ಇವೆಲ್ಲವನ್ನು ಆರೋಗ್ಯಕಾರಿಯಾಗಿ ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw