ಪತ್ನಿ ಕಪ್ಪಾಗಿದ್ದಾಳೆ ಎಂದು ಕತ್ತು ಹಿಸುಕಿ ಕೊಂದ ಪತಿ: ವರದಕ್ಷಿಣೆ ಕಿರುಕುಳ - Mahanayaka

ಪತ್ನಿ ಕಪ್ಪಾಗಿದ್ದಾಳೆ ಎಂದು ಕತ್ತು ಹಿಸುಕಿ ಕೊಂದ ಪತಿ: ವರದಕ್ಷಿಣೆ ಕಿರುಕುಳ

kalluburgi
02/03/2023

ಕಲಬುರಗಿ: ವರದಕ್ಷಿಣೆ ಹಾಗೂ ಕಪ್ಪು ಬಣ್ಣ ಅನ್ನೋ ಕಾರಣಕ್ಕೆ ಪತ್ನಿಯನ್ನು ಪತಿ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕೆಲ್ಲೂರ್ ಗ್ರಾಮದಲ್ಲಿ ನಡೆದಿದೆ.


Provided by

ಫರ್ಜಾನ ಬೇಗಂ (28) ಕೊಲೆಯಾದ ಮಹಿಳೆಯಾಗಿದ್ದಾರೆ. ಪತಿ ಖಾಜಾ ಪಟೇಲ್ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. 7 ವರ್ಷಗಳ ಹಿಂದೆ ಇವರಿಬ್ಬರ ವಿವಾಹವಾಗಿತ್ತು ಎಂದು ತಿಳಿದು ಬಂದಿದೆ.

ನೀನು ಕಪ್ಪಾಗಿದ್ದೀಯಾ ಎಂದು ಪತ್ನಿಗೆ ಖಾಜಾ ಪಟೇಲ್ ಆಗಾಗ ಕಿರುಕುಳ ಕೊಡುತ್ತಿದ್ದ, ವರ ದಕ್ಷಿಣೆಗಾಗಿ ಪೀಡಿಸುತ್ತಿದ್ದ. ವರದಕ್ಷಿಣೆ ತಾರದ ಕಾರಣ ಪತ್ನಿಯ ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಕೊಲೆ ಮಾಡಿದ ಬಳಿಕ ಖಾಜಾ ಪಟೇಲ್ ಮತ್ತು ಕುಟುಂಬ ಎಸ್ಕೇಪ್ ಆಗಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ