ಉರಿ ಬಿಸಿಲಿನಲ್ಲಿ 25 ಮಹಡಿಯ ಕಟ್ಟಡವನ್ನು ಸರಸರನೇ ಏರಿದ ಸಾಹಸಿ ಜ್ಯೋತಿರಾಜ್!
ಉಡುಪಿ: ಅಡ್ವೆಂಚರ್ ಮಂಕಿ ಕ್ಲಬ್ ಎಂಬ ಫೌಂಡೇಶನ್ ಸ್ಥಾಪನೆಗಾಗಿ ನಿಧಿ ಸಂಗ್ರಹಿ ಸುವ ಉದ್ದೇಶದಿಂದ ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಗುರುವಾರ ಉಡುಪಿಯ ಬ್ರಹ್ಮಗಿರಿಯಲ್ಲಿರುವ ವುಡ್ಸ್ವಿಲ್ ಎಂಬ 25 ಮಹಡಿಯ ಕಟ್ಟಡವನ್ನು ಏರುವ ಮೂಲಕ ಸಾಹಸ ಪ್ರದರ್ಶಿಸಿದ್ದಾರೆ.
ಬಿಸಿಲಿನಿಂದ ಸುಡುತ್ತಿದ್ದ ಬಹುಮಹಡಿ ಕಟ್ಟಡದ ಕಿಟಕಿಯ ಸರಳುಗಳನ್ನು ಹಿಡಿದೇ ಸರಸರನೇ 25 ಅಂತಸ್ತಿನ ಕಟ್ಟಡವನ್ನು ಕೇವಲ 20 ನಿಮಿಷದಲ್ಲಿ ಹತ್ತಿ ದರು. ಬಳಿಕ ಕಟ್ಟಡದ ತುತ್ತ ತುದಿಯಲ್ಲಿ ಕನ್ನಡ ಧ್ವಜವನ್ನು ಹಾರಿಸುವ ಮೂಲಕ ಸಂಭ್ರಮಿಸಿದರು. ಕಟ್ಟಡದ ಕೆಳಗೆ ನೆರೆದಿದ್ದ ನೂರಾರು ಸಂಖ್ಯೆಯ ಜನರು ಕರಡತನದ ಮೂಲಕ ಕೋತಿರಾಜ್ ಸಾಹಸಕ್ಕೆ ಪ್ರೋತ್ಸಾಹ ನೀಡಿದರು.
ಕೋತಿರಾಜ್ ಯಾವುದೇ ಪರಿಕರದ ಸಹಾಯ ಇಲ್ಲದೆ ಬರಿಕೈಯಲ್ಲಿ ಕಟ್ಟಡ ಏರಿದರೂ ಸುರಕ್ಷತೆಯ ದೃಷ್ಠಿಯಿಂದ ರೋಪ್ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಸ್ಥಳದಲ್ಲಿ ಉಡುಪಿ ನಗರ ಪೊಲೀಸರು ಹಾಗೂ ಅಗ್ನಿಶಾಮಕದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ಜನರಿಂದ ಸಂಗ್ರಹಿಸಿದ ನಿಧಿಯಿಂದ ಜಾಗ ಖರೀದಿಸಿ ಅಲ್ಲಿ ಫೌಂಡೇಶನ್ ಕಟ್ಟಡ ನಿರ್ಮಿಸಲು ಉದ್ದೇಶಿಸಿದ್ದೇನೆ. ಆ ಮೂಲಕ ಮಕ್ಕಳು ಹಾಗೂ ಯುವಕರಿಗೆ ಶಿಕ್ಷಣದ ಜೊತೆ ಕ್ಲಿಮ್ಮಿಂಗ್ ತರಬೇತಿ ಕೂಡ ನೀಡಲಿದ್ದೇನೆ. ಒಲಂಪಿಕ್ಸ್ ನಲ್ಲಿ ಕ್ಲಿಮ್ಮಿಂಗ್ ಸೇರ್ಪಡೆಯಾಗಿರುವುದರಿಂದ ನಮ್ಮ ಮಕ್ಕಳಿಗೆ ಉತ್ತಮ ತರಬೇತಿ ನೀಡಿ ಪದಕ ಗೆಲ್ಲಬೇಕೆಂಬುದೇ ನನ್ನ ಮಹಾದಸೆಯಾಗಿದೆ ಎಂದು ಕೋತಿರಾಜ್ ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw