ದೇಶದಲ್ಲಿ ಬಿಜೆಪಿಯ ಮತದ ಪ್ರಮಾಣ ಕುಸಿಯುತ್ತಿದೆ: ಉದ್ಧವ್ ಠಾಕ್ರೆ
ಮುಂಬೈ: ದೇಶದಲ್ಲಿ ಬಿಜೆಪಿಯ ಮತದ ಪ್ರಮಾಣ ಕುಸಿಯುತ್ತಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದು, ಇತ್ತೀಚಿನ ಉಪ ಚುನಾವಣೆಗಳನ್ನು ಗಮನಿಸಿದರೆ ಬಿಜೆಪಿಯ ಮತ ಕುಸಿಯುತ್ತಿರುವುದು ಖಾತರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ಕಸ್ಬಾಪೇಟ್ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾ ಆಘಾಡಿ ವಿಕಾಸ್ ಬೆಂಬಲಿತ ಅಭ್ಯರ್ಥಿ ವಿರುದ್ಧ ಪರಾಭವಗೊಂಡ ನಂತರ ಶಿವಸೇನೆ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕಿಯದಲ್ಲಿ ಠಾಕ್ರೆ ಈ ವಿಚಾರ ತಿಳಿಸಿದರು.
ಈ ಫಲಿತಾಂಶ ನೋಡಿದರೆ ಬಿಜೆಪಿ ಪಕ್ಷ ಕೇವಲ ಮಹಾರಾಷ್ಟ್ರದಲ್ಲಿ ಮಾತ್ರವಲ್ಲ ಇಡಿ ದೇಶದಲ್ಲೇ ಮತದಾರರ ಮನಸ್ಸಿನಿಂದ ಮಾಸಿ ಹೋಗುತ್ತಿರುವುದಕ್ಕೆ ಇದು ತಾಜಾ ಉದಾಹರಣೆ ಎಂದು ಅವರು ಬಣ್ಣಿಸಿದ್ದಾರೆ.
ನಾವು ಈ ಫಲಿತಾಂಶದ ಸಂಭ್ರಮಾಚರಣೆಯನ್ನು ಪೂನಾದಾದ್ಯಂತ ಆಚರಿಸುತ್ತಿದ್ದೇವೆ. ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲೂ ದೇಶದ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw