ಚಾಮರಾಜನಗರ: ವಿಜಯೇಂದ್ರ ಆಪ್ತನಿಗೆ ಬಿಜೆಪಿ ಕಾರ್ಯಕರ್ತನ ಕ್ಲಾಸ್…! ವೀಡಿಯೋ ವೈರಲ್

ಚಾಮರಾಜನಗರ: ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಓಡಾಡುತ್ತಿರುವ ವಿಜಯೇಂದ್ರ ಆಪ್ತ ವಲಯದ ಕೆಆರ್ಐಡಿಎಲ್ ಅಧ್ಯಕ್ಷ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ರುದ್ರೇಶ್ ಅವರಿಗೆ ಕಾರ್ಯಕರ್ತನೋರ್ವ ಕ್ಲಾಸ್ ತೆಗೆದುಕೊಂಡಿರುವ ಘಟನೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.
ಪಕ್ಷ ಯಾವುದೇ ತೀರ್ಮಾನ ತೆಗೆದುಕೊಳ್ಳದೇ ನೀವು ಕ್ಷೇತ್ರಕ್ಕೆ ಬಂದು ಓಡಾಡುತ್ತೀದ್ದೀರಿ, ಪಕ್ಷ ಒಡೆಯುವ ಕೆಲಸ ಮಾಡುತ್ತಿದ್ದೀರಿ,ಈಗ ಬಂದಿರುವ ನೀವು ಕೊರೊನಾ ಕಾಲದಲ್ಲಿ ಎಲ್ಲಿ ಹೋಗಿದ್ರಿ? ನಿಮ್ಮಿಂದ ಪಕ್ಷ ಡಿವೈಡ್ ಆಗುತ್ತಿದೆ ಎಂದು ಆಕ್ರೋಶ ಹೊರಹಾಕುವುದನ್ನು ಅಲ್ಲೇ ಇದ್ದವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿದ್ದು ಸದ್ಯ ವೀಡಿಯೋ ವೈರಲ್ಲಾಗಿದೆ.
ಲಿಂಗಾಯತ ಸಮಾಜ ಮೊದಲು ಬಳಿಕ ಪಾರ್ಟಿ ಎನ್ನುವ ರುದ್ರೇಶ್, ಚಾಮರಾಜನಗರದಲ್ಲಿ ಮಲ್ಲಿಕಾರ್ಜುನಪ್ಪ ಅವರಿಗಾದರೂ ಕೊಡಲಿ, ನಾಗಶ್ರೀ ಪ್ರತಾಪ್ ಅವರಿಗಾದರೂ ಕೊಡಲಿ, ಇಲ್ಲವೇ ನನಗಾದರೂ ಕೊಡಲಿ ಎನ್ನುತ್ತಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿದರಾದರೂ ಸಂಪರ್ಕಕ್ಕೆ ಸಿಗಲಿಲ್ಲ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw