ಕಾಡ್ಗಿಚ್ಚಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದ ಬೃಹತ್ ಕಾಳಿಂಗ ಸರ್ಪವನ್ನು ರಕ್ಷಿಸಿದ ಸ್ನೇಕ್ ಆರೀಫ್ - Mahanayaka
7:29 AM Sunday 22 - September 2024

ಕಾಡ್ಗಿಚ್ಚಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದ ಬೃಹತ್ ಕಾಳಿಂಗ ಸರ್ಪವನ್ನು ರಕ್ಷಿಸಿದ ಸ್ನೇಕ್ ಆರೀಫ್

king cobra
07/03/2023

ಕೊಟ್ಟಿಗೆಹಾರ: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಮೀಸಲು ಅರಣ್ಯದ ವ್ಯಾಪ್ತಿಗೆ ಸೇರುವ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶ ಕಳೆದ ಮೂರು ದಿನಗಳಿಂದ ನಿರಂತರವಾಗಿ ಹೊತ್ತಿ ಉರಿಯುತ್ತಿದೆ. ಚಾರ್ಮಾಡಿಯ ದಟ್ಟಕಾನನದಲ್ಲಿದ್ದ ಆಶ್ರಯ ಪಡೆದುಕೊಂಡಿದ್ದ ನೂರಾರು ಪ್ರಾಣಿಪಕ್ಷಿಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾಗಿವೆ. ಆದರೆ, ಕೆಲ ಪ್ರಾಣಿಗಳು ಜೀವ ಉಳಿಸಿಕೊಳ್ಳಲು ನಾಡಿನತ್ತ ಮುಖ ಮಾಡಿವೆ.

ಮರದ ಪೊಟರೆ, ಭೂಮಿಯ ಒಳಗೆ ಹೆಚ್ಚಾಗಿ ವಾಸ ಮಾಡುವ ಕಾಳಿಂಗ ಸರ್ಪಗಳು ಮರದಲ್ಲೂ ಇರಲಾಗದೆ, ಬೆಂಕಿ ಬಿದ್ದ ಭೂಮಿಯ ತಾಪದಿಂದ ಭೂಮಿಯ ಒಳಗೂ ಇರಲಾರದೆ ನಾಡಿನತ್ತ ಮುಖ ಮಾಡಿವೆ. ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ತುರುವೆ ಗ್ರಾಮದಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಆಶ್ರಯ ಪಡೆದುಕೊಳ್ಳಲು ಜಾಗ ಹುಡುಕುತ್ತಿರುವಾಗ ಸ್ಥಳಿಯರ ಕಣ್ಣಿಗೆ ಬಿದ್ದು ಸೆರೆಯಾಗಿದೆ.

ತುರುವೆ ಗ್ರಾಮದ ಸಮುದಾಯ ಭವನದ ಬಳಿ ಬಂದ ಸುಮಾರು 15 ಅಡಿ ಉದ್ದದ ಕಾಳಿಂಗ ಸರ್ಪ ಬೆಚ್ಚನೆಯ ಜಾಗ ಹುಡುಕುತ್ತಿದ್ದ ವೇಳೆ ಸ್ಥಳಿಯರ ಕಣ್ಣಿಗೆ ಬಿದ್ದಿದೆ. ದೈತ್ಯಾಕಾರದ ಕಾಳಿಂಗ ಸರ್ಪವನ್ನ ಕಂಡ ಸ್ಥಳಿಯರು ಆತಂಕದಿಂದ ಕೂಗಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಸುಮಾರು ಅರ್ಧ ಗಂಟೆಗಳ ಕಾರ್ಯಾಚರಣೆ ನಡೆಸಿ ದೈತ್ಯ ಕಾಳಿಂಗನನ್ನ ಸೆರೆ ಹಿಡಿದಿದ್ದಾರೆ. ಸೆರೆ ಹಿಡಿದ ಬಳಿಕ ತೀವ್ರ ನಿತ್ರಾಣಗೊಂಡಿದ್ದ ಕಾಳಿಂಗ ಸರ್ಪಕ್ಕೆ ನೀರು ಕುಡಿಸಿದ್ದಾರೆ.


Provided by

ಈ ಕಾಳಿಂಗ ಸರ್ಪ ಎಷ್ಟು ದೈತ್ಯಾಕಾರವಿದೆ ಅಂದ್ರೆ, ಸೆರೆ ಹಿಡಿದ ಸ್ನೇಕ್ ಆರೀಫ್ ಅದನ್ನ ಎತ್ತಿಕೊಳ್ಳಲು ಕಷ್ಟಪಡಬೇಕಾದಷ್ಟು ಭಾರವಾಗಿತ್ತು ಈ ಕಾಳಿಂಗ ಸರ್ಪ. ಕೊನೆಗೆ ಸೆರೆ ಹಿಡಿದ ಕಾಳಿಂಗ ಸರ್ಪವನ್ನ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಚಾರ್ಮಾಡಿ ಘಾಟಿಯಲ್ಲೇ ಬೆಂಕಿ ಬೀಳದ ಪ್ರದೇಶಕ್ಕೆ ಬಿಟ್ಟಿದ್ದಾರೆ. ಆದರೆ, ಚಾರ್ಮಾಡಿ ಘಾಟಿಯ ಸುತ್ತಮುತ್ತಲಿನ ಜನ ಭಯದಲ್ಲಿ ಬದುಕುವಂತಾಗಿದೆ. ಅರಣ್ಯಕ್ಕೆ ಬಿದ್ದಿರೋ ಬೆಂಕಿ ನಿಲ್ಲುವಂತೆ ಕಾಣುತ್ತಿಲ್ಲ. ಮೂರು ದಿನಗಳಿಂದ ಒಂದೇ ಸಮನೆ ಹೊತ್ತಿ ಧಗಧಗಿಸುತ್ತಿದೆ. ಈ ವೇಳೆ ಕಾಡುಪ್ರಾಣಿಗಳು ಕಾಡಂಚಿನ ಗ್ರಾಮಗಳಿಗೆ ಬಂದರೆ ಏನು ಮಾಡುವುದು, ಬದುಕುವುದು ಹೇಗೆಂದು ಜನ ಆತಂಕದಿಂದ ಬದುಕುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ