ಮೀಸಲು ಅರಣ್ಯದಲ್ಲಿ 60ಕ್ಕೂ ಹೆಚ್ಚು ಬಂದೂಕಿನ ಖಾಲಿ ಕಾಟ್ರೆಜ್ ಪತ್ತೆ!
ಕೊಟ್ಟಿಗೆಹಾರ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಮೀಸಲು ಅರಣ್ಯದಲ್ಲಿ ಬಂದೂಕಿನ ಖಾಲಿ ಕಾಟ್ರೆಜ್ ಗಳು ಪತ್ತೆಯಾಗಿವೆ. 60ಕ್ಕೂ ಹೆಚ್ಚು ಬಂದೂಕಿನ ಖಾಲಿ ಕಾಟ್ರೆಜ್ ಗಳು ಪತ್ತೆಯಾಗಿದ್ದು, ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸಾರಗೋಡು-ತತ್ಕೋಳ ಮೀಸಲು ಅರಣ್ಯದ ರಸ್ತೆಯಲ್ಲಿ ಫೈರಿಂಗ್ ಆದ ಖಾಲಿ ಕಾಟ್ರೆಜ್ ಗಳು ಪತ್ತೆಯಾಗಿದೆ. ವಗೇರ್ ನಿಂದ ಕನ್ನಗದ್ದೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಕಾಡು ಪ್ರಾಣಿಗಳ ಶಿಕಾರಿಗಾಗಿ ಬಂದೂಕು ಬಳಸಲಾಗಿದೆಯೇ ಅನ್ನೋ ಶಂಕೆ ವ್ಯಕ್ತವಾಗಿದೆ.
ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯಾಧಿಕಾರಿಗಳು ಭೇಟಿ ನೀಡಿ ನೀಡಿದ್ದಾರೆ. ಒಂದೇ ಕಡೆ 60ಕ್ಕೂ ಹೆಚ್ಚು ಕಾಟ್ರೇಜ್ ಪತ್ತೆಯಾಗಿರುವುದರಿಂದ ಹಲವು ಅನುಮಾನಗಳು ಸೃಷ್ಟಿಯಾಗಿವೆ.
ಕಾಡು ಪ್ರಾಣಿಗಳು ಅತೀ ಹೆಚ್ಚಿರುವ ಸಾರಗೋಡು ತತ್ಕೋಳ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅನಧಿಕೃತ ಬಂದೂಕುಗಳ ವಶ ಪ್ರಕರಣದ ಬೆನ್ನಲ್ಲೆ ಖಾಲಿ ಕಾಟ್ರೆಜ್ ಗಳು ಪತ್ತೆಯಾಗಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw