ತಂದೆ-ತಾಯಿ ಬಳಿ ಜಗಳವಾಡಿದ ಸಹೋದರರು ಬಾವಿಗೆ ಹಾರಿ ಆತ್ಮಹತ್ಯೆ
04/01/2021
ಕಲಬುರಗಿ: ಇಬ್ಬರು ಸಹೋದರರು ಪೋಷಕರೊಂದಿಗೆ ಜಗಳವಾಡಿ ಬಾವಿಗೆ ಹಾರ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರಿನಲ್ಲಿ ನಡೆದಿದೆ.
17 ವರ್ಷ ಪ್ರಾಯದ ಸುನೀಲ್ ಹಾಗೂ 12 ವರ್ಷದ ಶೇಖರ್ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಮೊಬೈಲ್ ವಿಚಾರಕ್ಕೆ ಸಂಬಂಧಿಸಿದಂತೆ ಪೋಷಕರೊಂದಿಗೆ ಜಗಳವಾಡಿದ್ದು, ಇದೇ ಕಾರಣಕ್ಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇವರಿಬ್ಬರಿಗೂ ಈಜು ಬರುತ್ತಿತ್ತು. ಈ ಕಾರಣಕ್ಕಾಗಿ ಅವರು ತಮ್ಮ ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ತಂದೆ, ತಾಯಿಯ ಜೊತೆಗೆ ಜಗಳವಾಡಿದ ನಂತರ ನೇರವಾಗಿ ಹೊಲದಲ್ಲಿದ್ದ ಬಾವಿಯ ಬಳಿಗೆ ಬಂದ ಇವರಿಬ್ಬರು ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿದ್ದಾರೆ.