ಅವರು ದಲಿತ ಸಿಎಂ ಆಗ್ತಾರೆ ಎನ್ನುವ ಆಶಾಭಾವನೆ ಇತ್ತು: ಧ್ರುವ ಒಡನಾಡಿಗಳ ಕಂಬನಿ
ಚಾಮರಾಜನಗರ: ರಾಜ್ಯದಲ್ಲಿ ಧ್ರುವನಾರಾಯಣ ಸಚಿವರಾಗುತ್ತಾರೆ, ದಲಿತ ಸಿಎಂ ಆಗುತ್ತಾರೆ ಎನ್ನುವ ಆಶಾಭಾವನೆ ಇಟ್ಟುಕೊಂಡಿದ್ದೆವು ಎಂದು ಧ್ರುವನಾರಾಯಣ ಒಡನಾಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಬಸವರಾಜು ಕಂಬನಿ ಮಿಡಿದಿದ್ದಾರೆ.
ಧ್ರುವನಾರಾಯಣ ಹುಟ್ಟೂರು ಹೆಗ್ಗವಾಡಿಯಲ್ಲಿ ಅವರು ಮಾತನಾಡಿ, ಪಕ್ಷಕ್ಕಾಗಿ 24 ಗಂಟೆಯೂ ದುಡಿಯುತ್ತಿದ್ದ ಧ್ರುವನಾರಾಯಣ ರಾಜ್ಯದಲ್ಲಿ ಭರವಸೆ ನಾಯಕರಾಗಿದ್ದರು. ವಿಶ್ರಾಂತಿಯೇ ಇಲ್ಲದೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು ಎಂದರು.
ಯಾವ ಪಕ್ಷದ ಜನರೇ ಆಗಿರಲಿ ಎಲ್ಲರಿಗೂ ಕೆಲಸ ಮಾಡಿಕೊಡುತ್ತಿದ್ದರು, ಯಾವಾಗಲೂ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತಿದ್ದರು, ಧ್ರುವನಾರಾಯಣ ಅವರಲ್ಲಿ ಪಕ್ಷ, ಧರ್ಮ, ಜಾತಿ ಬೇಧ ಯಾವುದು ಇರಲಿಲ್ಲ ಅವತ ಅಗಲಿಕೆ ಪಕ್ಷಕ್ಕೆ, ನಾಡಿಗೆ ತುಂಬಲಾರದ ನಷ್ಟ ಎಂದು ಕಂಬನಿ ಹಾಕಿದರು.
ಕ್ಯಾಪ್ಟನ್ ಗಳಿಲ್ಲದ ಕಾಂಗ್ರೆಸ್: ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ನ ಕ್ಯಾಪ್ಟನ್ ಗಳಾಗಿದ್ದ ಎಚ್.ಎಸ್.ಮಹಾದೇವಪ್ರಸಾದ್ ಹಾಗೂ ಧ್ರುವನಾರಾಯಣ ಅವರು ಅಭಿವೃದ್ಧಿಗೆ ಟೊಂಕ ಕಟ್ಟಿದ್ದವರು. ಎಚ್ಎಸ್ಎಂ ಹೋದ ಬಳಿಕ ಕಾಂಗ್ರೆಸ್ ಬಡವಾಯಿತು, ಈಗ ಧ್ರುವನಾರಾಯಣ ಹೋದ ಬಳಿಕ ಮತ್ತಷ್ಟು ಬಡವಾಗಿದೆ ಎಂದು ಧ್ರುವನಾರಾಯಣ ಅನುಯಾಯಿ, ಆತ್ಮೀಯ ಸದಾಶಿವಮೂರ್ತಿ ದುಃಖ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ಧ್ರುವನಾರಾಯಣ ತಂದರೇ ರಾಜ್ತೆ ಸರ್ಕಾರದ ಯೋಜನೆಗಳನ್ನು ತರುತ್ತಿದ್ದರು. ಧ್ರುವನಾರಾಯಣ ಅವರ ಅಗಲಿಕೆ ಕಾಂಗ್ರೆಸ್ ಗೆ ಮಾತ್ರವಲ್ಲ ಜಿಲ್ಲೆಗೆ, ಹಳೇ ಮೈಸೂರು ಭಾಗದ ಅಭಿವೃದ್ಧಿಗೆ ನಷ್ಟ ಆಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw