ರಾಜ್ಯವೇ ಮರುಗಿದ್ದ ಕಂಡಕ್ಟರ್ ಸಜೀವ ದಹನ ಕೇಸ್ ಗೆ ಬಿಗ್ ಟ್ವಿಸ್ಟ್: ಇದರ ಹಿಂದಿರುವವರು ಯಾರು ಗೊತ್ತೇ? ಪೊಲೀಸರಿಂದ ಶಾಕಿಂಗ್ ಮಾಹಿತಿ
ಬೆಂಗಳೂರು:ಎರಡು ದಿನಗಳ ಹಿಂದೆ ನಿಂತಿದ್ದ ಬೆಂಗಳೂರು ಸಿಟಿ ಬಸ್ ನಿಂತಿದ್ದಾಗ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಕಂಡಕ್ಟರ್ ಮುತ್ತಪ್ಪ ಅವರ ಸಜೀವ ದಹನ ನಡೆದು ಹೋಯಿತು.
ಇದೀಗ ಈ ಘಟನೆ ಭಾರಿ ಚರ್ಚೆಗೆ ಒಳಗಾಗಿದೆ. ಈ ಘಟನೆ ಸಹಜವಾಗಿ ನಡೆದ ಘಟನೆಯ ಅಥವಾ ಇದರ ಹಿಂದೆ ಡ್ರೈವರ್ ಪ್ರಕಾಶ್ ಕೈವಾಡ ಇದೆಯಾ ಎನ್ನುವ ಅನುಮಾನ ಈಗ ಶುರುವಾಗಿದೆ.
ಈ ಘಟನೆ ನಡೆದಿರುವುದು ಬೆಂಗಳೂರು ನಗರದ ಬ್ಯಾಡರಹಳ್ಳಿ ಠಾಣೆಯ ವ್ಯಾಪ್ತಿಗೆ ಬರುವ ಲಿಂಗಧೀರನಹಳ್ಳಿ ಬಸ್ ಸ್ಟ್ಯಾಂಡ್ ನಲ್ಲಿ. ಈ ಬಸ್ ರಾತ್ರಿ 10:30ಕ್ಕೆ ಬಸ್ ಸ್ಟ್ಯಾಂಡ್ ಗೆ ಬಂದು ನಿಂತಿತ್ತು, ಬಸ್ ಇಂಜಿನ್ ಆಫ್ ಆಗಿತ್ತು.
ಆದರೆ ಬೆಳಗ್ಗಿನ ಜಾವ 4:26ಕ್ಕೆ ಈ ಘಟನೆ ನಡೆದು, ಬಸ್ ಹೊತ್ತು ಉರಿದಿದೆ. ಈ ರೀತಿಯ ಘಟನೆ ನಡೆದಾಗ ಡ್ರೈವರ್ ಪ್ರಕಾಶ್ ರೂಮ್ ನಲ್ಲಿ ಮಲಗಿದ್ದು, ಮಧ್ಯರಾತ್ರಿ 3 ಗಂಟೆ ಸಮಯಕ್ಕೆ ಒಂದು ಸಾರಿ ಹಾಗೆಯೇ 4 ಗಂಟೆ ಸಮಯಕ್ಕೆ ಒಂದು ಸಾರಿ ಎದ್ದಿದ್ದಾನೆ.
ಇದು ಬಸ್ ಸ್ಟ್ಯಾಂಡ್ ನಲ್ಲಿ ಇರುವ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಈ ಬಗ್ಗೆ ಪ್ರಕಾಶ್ ಗೆ ವಿಚಾರಿಸಿದಾಗ, ಮೂತ್ರ ವಿಸರ್ಜನೆಗೆ ಹೋಗಲು ಎದ್ದಿದ್ದೆ ಎಂದು ಹೇಳಿದ್ದಾನೆ. ಹಾಗಾಗಿ ಪ್ರಕಾಶ್ ಮೇಲೆ ಎಲ್ಲರಲ್ಲೂ ಅನುಮಾನ ಶುರುವಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಎಫ್.ಎಸ್.ಎಲ್ ಅಧಿಕಾರಿಗಳು ಬಂದು, ಜಾಗವನ್ನು ಪರಿಶೀಲನೆ ಮಾಡಿ, ಸಿಕ್ಕಿರುವ ಕೆಲವು ಸ್ಯಾಂಪಲ್ಸ್ ಗಳನ್ನು ಪರಿಶೀಲನೆ ಮಾಡಲು ತೆಗೆದುಕೊಂಡು ಹೋಗಿದ್ದಾರೆ. ಈ ಎಲ್ಲಾ ಪರಿಶೀಲನೆ ಮತ್ತು ವರದಿಗಳು ಮುಗಿದ ನಂತರ ಅಸಲಿ ಸತ್ಯ ಗೊತ್ತಾಗಲಿದೆ.
ಡ್ರೈವರ್ ಪ್ರಕಾಶ್ ಮೇಲೆ ಅನುಮಾನದ ಇದ್ದು, ಜೊತೆಗೆ ಅಧಿಕಾರಿಗಳು ಮತ್ತು ಮುತ್ತಪ್ಪ ನಡುವೆ ಏನಾದರು ಮನಸ್ತಾಪ ಇತ್ತ ಎನ್ನುವ ಅನುಮಾನ ಕೂಡ ಶುರುವಾಗಿದೆ. ಬಸ್ ಅನ್ನು ಇತ್ತೀಚೆಗೆ ಚೆಕ್ ಮಾಡಲಾಗಿದ್ದು, ಬಸ್ ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಕೂಡ ಹೇಳಲಾಗಿತ್ತು. ಹಾಗಿದ್ದರೂ, ಬೆಳಗ್ಗಿನ ಜಾವ ಬಸ್ ಹೊತ್ತಿಕೊಂಡಿದ್ದು ಹೇಗೆ ಎನ್ನುವ ಪ್ರಶ್ನೆ ಹಾಗೂ ಅನುಮಾನ ಶುರುವಾಗಿದ್ದು, ಶೀಘ್ರದಲ್ಲೇ ಉತ್ತರ ಸಿಗಲಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw