ಬ್ರಾಹ್ಮಣರಲ್ಲಿ ಮಾತ್ರ ಮದುವೆಯಾಗದ ಗಂಡಸರು ಇರುವುದೇ? ಎಲ್ಲ ಜಾತಿಯವರಿಗೂ 3 ಲಕ್ಷ ರೂ ನೀಡಿ | ಯಡಿಯೂರಪ್ಪ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ - Mahanayaka
8:06 PM Saturday 21 - December 2024

ಬ್ರಾಹ್ಮಣರಲ್ಲಿ ಮಾತ್ರ ಮದುವೆಯಾಗದ ಗಂಡಸರು ಇರುವುದೇ? ಎಲ್ಲ ಜಾತಿಯವರಿಗೂ 3 ಲಕ್ಷ ರೂ ನೀಡಿ | ಯಡಿಯೂರಪ್ಪ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ

05/01/2021

ಬೆಂಗಳೂರು:  ರಾಜ್ಯ ಸರ್ಕಾರವು ಬ್ರಾಹ್ಮಣ ಪುರೋಹಿತರನ್ನು ಮದುವೆಯಾಗುವ ವಧುಗಳಿಗೆ 3 ಲಕ್ಷ ಬಾಂಡ್ ವಿತರಿಸುವ ‘ಮೈತ್ರಿ’ ಯೋಜನೆಯನ್ನು ರೂಪಿಸಿದೆ. ಇದು ಇದೀಗ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

 

ಕೇವಲ ಬ್ರಾಹ್ಮಣರಲ್ಲಿ ಮಾತ್ರವೇ ಮದುವೆಯಾಗದೇ ಉಳಿದಿರುವ ಗಂಡಸರು ಇರುವುದೇ? ಎಲ್ಲ ಜಾತಿಯಲ್ಲೂ ಮದುವೆಯಾಗದೇ ಉಳಿದಿರುವ ಗಂಡಸರಿದ್ದಾರೆ. ಅವರನ್ನು ಮದುವೆಯಾಗುವ ವಧುಗಳಿಗೂ ಸರ್ಕಾರ 3 ಲಕ್ಷ ರೂ ಬಾಂಡ್ ನೀಡುವ ಮೈತ್ರಿ ಯೋಜನೆಯನ್ನು ಜಾರಿಗೆ ತರಲಿ ಎಂದು ಜನರು ಆಗ್ರಹಿಸುತ್ತಿದ್ದಾರೆ.

 

ಹಿಂದೂಗಳಲ್ಲಿ ಬ್ರಾಹ್ಮಣರಿಗೆ ಮಾತ್ರವೇ ಏಕೆ ಮಾನ್ಯತೆ ನೀಡಲಾಗುತ್ತಿದೆ. ಹಾಗಿದ್ದರೆ, ಇತರ ಜಾತಿಯವರು ಮನುಷ್ಯರಲ್ಲವೇ? ಅವರಿಗೂ ಕಷ್ಟಗಳಿರುವುದಿಲ್ಲವೇ? ಎಷ್ಟೋ ಬಡವರ ಮನೆಗಳಲ್ಲಿ ಹೆಣ್ಣು ಮಕ್ಕಳು ಮದುವೆಯಾಗದೇ ಉಳಿದಿದ್ದಾರೆ. ಅವರನ್ನು ಮದುವೆಯಾಗುವ ವರನಿಗೆ ಮೂರು ಲಕ್ಷ ರೂಪಾಯಿ ಸರ್ಕಾರ ಘೋಷಿಸಲಿ. ಕೇವಲ ಬ್ರಾಹ್ಮಣರಲ್ಲಿ ಮಾತ್ರವೇ ಮದುವೆಯಾಗದೇ ಉಳಿದಿರುವ ಮನುಷ್ಯರು ಇರುವುದಲ್ಲ, ಎಲ್ಲ ಸಮುದಾಯದಲ್ಲಿಯೂ ಇದ್ದಾರೆ ನೀಡುವುದಾದರೆ ಎಲ್ಲರಿಗೂ ನೀಡಿ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಒಟ್ಟಿನಲ್ಲಿ ಸಿದ್ದರಾಮಯ್ಯನವರು ಈ ಹಿಂದೆ ಮುಸ್ಲಿಮ್ ಯುವತಿಯರಿಗೆ ಘೋಷಿಸಿದ್ದ ಶಾದಿಭಾಗ್ಯದಂತೆಯೇ ಅದೇ ಯೋಜನೆಯನ್ನು ಬ್ರಾಹ್ಮಣ ಯುವಕರ ಮದುವೆಗಾಗಿ ಯಡಿಯೂರಪ್ಪ ಸರ್ಕಾರ ಮಾಡಿದೆ. ಇಲ್ಲದವರಿಗೆ ನೀಡುವುದರಲ್ಲಿ ಒಂದು ಅರ್ಥವಿದೆ. ಲಕ್ಷಾಂತರ ದುಡಿಯುವ ಪುರೋಹಿತರಿಗೆ ಮೈತ್ರಿ ಯೋಜನೆ ಯಾಕೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.

 

ಇತ್ತೀಚಿನ ಸುದ್ದಿ