ಸಾಗರ, ಮಂಗಳೂರಿನಿಂದ ಮಾದಕ ವಸ್ತು ತಂದು ಮಾರುತ್ತಿದ್ದವರ ಬಂಧನ
ಶಿವಮೊಗ್ಗ: ಮಂಗಳೂರಿನಿಂದ ಮಾದಕ ವಸ್ತು ತಂದು, ಸಾಗರದ ವ್ಯಕ್ತಿಗಳಿಗೆ ನೀಡುತ್ತಿದ್ದ ಪ್ರಕರಣವೊಂದನ್ನು ಸಾಗರ ಟೌನ್ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.
ಮಂಗಳೂರಿನ ತೋಡಾರ್ ಗ್ರಾಮದ ನಿವಾಸಿ ಸೃಜನ್ ಎಸ್ ಶೆಟ್ಟಿ (20), ಸಾಗರ ಪಟ್ಟಣದ ಅಣಲೇಕೊಪ್ಪದ ನಿವಾಸಿ ಮೊಹಮ್ಮದ್ ಸಮ್ಮಾನ್ ಯಾನೆ ಸಲ್ಮಾನ್ (24) ಹಾಗೂ ಶ್ರೀಧರ್ ನಗರದ ನಿವಾಸಿ ಮೊಹಮ್ಮದ್ ಯಾಸೀಫ್ (25) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಬಂಧಿತರಿಂದ 1.06 ಗ್ರಾಂ ತೂಕದ ಬಿಳಿ ಬಣ್ಣದ ಮಾದಕ ವಸ್ತುವಿನ ಪುಡಿ, ದ್ರವರೂಪದ ವಸ್ತುವಿದ್ದ ಬಾಟಲಿ, ಖಾಲಿ ಮಾತ್ರೆಯ ಶೀಟ್, 4 ಮೊಬೈಲ್ ಫೋನ್, 2 ಸಿಮ್ ಕಾರ್ಡ್, 200 ರೂಪಾಯಿ, ಸ್ವಿಪ್ಟ್ ಡಿಸೈರ್ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಗರ ಟೌನ್ ಠಾಣೆ ಇನ್ಸ್’ಪೆಕ್ಟರ್ ಸೀತಾರಾಂ, ಸಾಗರ ಉಪವಿಭಾಗದ ಅಬಕಾರಿ ಉಪಾಧೀಕ್ಷಕರಾದ ಶಿವಪ್ರಸಾದ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಈ ಸಂಬಂಧ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw