ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಪ್ರಯೋಜನಕ್ಕೆ ಬಾರದ ವಿಸಿಟಿಂಗ್ ಕಾರ್ಡ್: ಸಿಎಂ ಬೊಮ್ಮಾಯಿ - Mahanayaka
3:15 AM Tuesday 10 - December 2024

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಪ್ರಯೋಜನಕ್ಕೆ ಬಾರದ ವಿಸಿಟಿಂಗ್ ಕಾರ್ಡ್: ಸಿಎಂ ಬೊಮ್ಮಾಯಿ

basavaraj bommai
16/03/2023

ದಕ್ಷಿಣ ಕನ್ನಡ: ಕಾಂಗ್ರೆಸ್ ನೀಡಿರುವ ಗ್ಯಾರಂಟಿ ನಕಾರ್ಡ್ ಡಿಬಿಟ್,  ಕೆಡಿಟ್ ಇಲ್ಲದ ಪ್ರಯೋಜನಕ್ಕೆ ಬಾರದ ವಿಸಿಟಿಂಗ್ ಕಾರ್ಡ್  ಇದ್ದಂತೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು  ಮಂಗಳೂರಿನ ಮೇರಿ ಹಿಲ್ಸ್ ಹೆಲಿಪ್ಯಾಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾಂಗ್ರೆಸ್  ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಹತಾಶವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,  ಏಕೆ ಹತಾಶರಾಗಬೇಕು. ಜನರೇ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇವರ ಮಾತಿನ ಮೇಲೆ   ವಿಶ್ವಾಸ ವಿಲ್ಲ ಎಂದು ಗ್ಯಾರಂಟಿ ಕಾರ್ಡ್ ಕೊಟ್ಟಿದ್ದಾರೆ.  ಗ್ಯಾರಂಟಿ ಕಾರ್ಡ್ ಹಿಂದೆ  ಗೃಹ ಲಕ್ಷ್ಮಿ ಎಂದು ಬರೆದಿದ್ದಾರೆ.  ಬ್ಯಾಂಕಿನಲ್ಲಿ ದುಡ್ಡಿಟ್ಟು ಕಾರ್ಡ್ ಕೊಟ್ಟರೆ ಬೆಲೆ ಇರುತ್ತದೆ ಎಂದರು.

ವೇಳಾಪಟ್ಟಿಯಂತೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ:

ಮಾರ್ಚ್ 17 ಕ್ಕೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡುತ್ತಿದ್ದು, ಬಿಜೆಪಿ ಸಮೀಕ್ಷೆ ನಡೆಸುತ್ತಿದೆ. ಕಾಂಗ್ರೆಸ್ ಏನು ಮಾಡುತ್ತಾರೆ ಎನ್ನುವುದಕ್ಕೂ ನಮಗೂ ಸಂಬಂಧವಿಲ್ಲ. ನಮ್ಮ ವೇಳಾಪಟ್ಟಿಯಂತೆ ನಾವು ಘೋಷಣೆ ಮಾಡುತ್ತೇವೆ ಎಂದರು.

ಹೊಸತೇನಲ್ಲ:

ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ  ಕುರಿತಂತೆ ಮಾತನಾಡಿ ಪ್ರತಿ ಚುನಾವಣೆಯಲ್ಲೂ ಪಕ್ಷ ಹಲವಾರು ತೀರ್ಮಾನವನ್ನು ಗೆಲ್ಲಲು ಮಾಡುತ್ತಾರೆ. ಅದೇನೂ ಹೊಸತಲ್ಲ ಎಂದರು.

ಕಾಂಗ್ರೆಸ್ ನಲ್ಲಿ  ಸಭ್ಯತೆ ದಿವಾಳಿಯಾಗಿದೆ:

ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಕಾಂಗ್ರೆಸ್ ಎಲ್ಲದರಲ್ಲೂ ಮಾಡುತ್ತಿದೆ. ಟೋಲ್ ಬಗ್ಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಟೋಲ್ ಸಂಗ್ರಹವಾಗಿಲ್ಲವೇ?  ಎಲ್ಲದರಲ್ಲೂ ರಾಜಕಾರಣ ಮಾಡುವ ಕೆಟ್ಟ ಪರಂಪರೆ ಕಾಂಗ್ರೆಸ್ ನಲ್ಲಿದೆ. ಸಮಸ್ಯೆ ಇದ್ದರೆ ಕುಳಿತು ಬಗೆಹರಿಸಬಹುದು. ಅವರು ಬಳಸುವ ಭಾಷೆ ಯಾವ  ಕನ್ನಡಿಗರೂ ಒಪ್ಪುವುದಿಲ್ಲ. ಕಾಂಗ್ರೆಸ್ ನಲ್ಲಿ  ಸಭ್ಯತೆಯ ದಿವಾಳಿಯಾಗಿದೆ ಎಂದರು.

ಪ್ರತಿಭಟನೆಗಳು  ಸಹಜ:

ಚುನಾವಣೆ ಇದ್ದಾಗ ಪ್ರತಿಭಟನೆಗಳು ಹೆಚ್ಚಾಗುವುದು ಸಹಜ. ಎಲ್ಲರ ಸಮಸ್ಯೆ ಬಗೆಹರಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು.

ಭಿನ್ನಾಭಿಪ್ರಾಯ ಇಲ್ಲ:

ಸಚಿವ ಸೋಮಣ್ಣ ಅವರಿಗೆ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಮಧ್ಯೆ ಭಿನ್ನಾಭಿಪ್ರಾಯ ಏನಿಲ್ಲ ಎಂದರು. ಯಡಿಯೂರಪ್ಪ ಅವರೊಂದಿಗೆ ಯಾರದ್ದೂ ಭಿನ್ನಾಭಿಪ್ರಾಯ ಇಲ್ಲ ಎಂದರು. ಅವರೇ ಹೇಳಿದಂತೆ ತಂದೆ ಮಗನ ಸಂಬಂಧವಿದ್ದಂತೆ. ಕೆಲವು ವಿಚಾರ ಗಳಲ್ಲಿ ನಮ್ಮನ್ನು ಕೇಳಬೇಕೆಂದಿರುತ್ತದೆ. ಯಡಿಯೂರಪ್ಪ ಅವರು ಅತ್ಯಂತ ಎತ್ತರದ ಸ್ಥಾನದಲ್ಲಿರುವವರು.  ಅವರೇ ಹೇಳಿರುವಂತೆ ಎಲ್ಲವೂ ಸರಿಯಾಗುತ್ತದೆ ಎಂದರು.

ಕೆಲಸ ಮಾಡಿದ್ದಾರೆ:

ಚಾಮರಾಜನಗರದ ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರ ಹಸ್ತಕ್ಷೇಪವಾಗಿದೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ ಮುಖ್ಯ ಮಂತ್ರಿಯಾಗಿ ಅವರಿಗೆ ಜವಾಬ್ದಾರಿ ಕೊಟ್ಟಿದ್ದು ಕೆಲಸ ಮಾಡಿದ್ದಾರೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ