ಬೆಂಗಳೂರಲ್ಲಿ ಜನಿಸಿದ ಮಾತ್ರಕ್ಕೆ ಕನ್ನಡ ಬರಲೇಬೇಕು ಅಂತಾ ರೂಲ್ಸ್​ ಇದ್ಯಾ?’ ಎಂದ ಖ್ಯಾತ ಡ್ಯಾನ್ಸರ್​ ಗೆ ಕನ್ನಡಿಗರಿಂದ ತರಾಟೆ - Mahanayaka
1:09 AM Wednesday 11 - December 2024

ಬೆಂಗಳೂರಲ್ಲಿ ಜನಿಸಿದ ಮಾತ್ರಕ್ಕೆ ಕನ್ನಡ ಬರಲೇಬೇಕು ಅಂತಾ ರೂಲ್ಸ್​ ಇದ್ಯಾ?’ ಎಂದ ಖ್ಯಾತ ಡ್ಯಾನ್ಸರ್​ ಗೆ ಕನ್ನಡಿಗರಿಂದ ತರಾಟೆ

salman yusuf khan
16/03/2023

ಬೆಂಗಳೂರು : ಹಿಂದಿ ಖಾಸಗಿ ವಾಹಿನಿಯ ಡ್ಯಾನ್ಸ್​ ಇಂಡಿಯಾ ಡ್ಯಾನ್ಸ್​ ವಿನ್ನರ್​ ಹಾಗೂ ಖಾಸಗಿ ಕನ್ನಡ ವಾಹಿನಿಯೊಂದರಲ್ಲಿ ಡ್ಯಾನ್ಸಿಂಗ್​ ರಿಯಾಲಿಟಿ ಶೋ ಜಡ್ಜ್​ ಕೂಡ ಆಗಿದ್ದ ಸಲ್ಮಾನ್​ ಯುಸೂಫ್​ ಖಾನ್​​ ಕನ್ನಡದ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡುವ ಮೂಲಕ ಭಾರೀ ವಿರೋಧವನ್ನು ಎದುರಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿದ್ದೇನೆ ಎಂದ ಮಾತ್ರಕ್ಕೆ ಕನ್ನಡ ಬರಲೇಬೇಕು ಅಂತಾ ನಿಯಮವಿದ್ಯಾ..? ಎಂದು ಸಲ್ಮಾನ್​ ಪ್ರಶ್ನಿಸಿದ್ದು ಕನ್ನಡಿಗರ ಕಣ್ಣು ಕೆಂಪಗಾಗಿಸಿದೆ.

ಸಲ್ಮಾನ್​ ಯುಸೂಫ್​ ಖಾನ್​ ಮೂಲತಃ ಬೆಂಗಳೂರಿನವರು. ಇವರ ತಂದೆ ಹಾಗೂ ಸಲ್ಮಾನ್​ ಎಲ್ಲರೂ ಬೆಂಗಳೂರಿನಲ್ಲಿ ಜನಿಸಿದವರೇ. ಆದರೂ ಇವರು ಕನ್ನಡದ ಬಗ್ಗೆ ತೋರಿದ ನಿರ್ಲಕ್ಷ್ಯದ ಧೋರಣೆ ಇದೀಗ ಭಾರೀ ವಿವಾದಕ್ಕೆ ಗ್ರಾಸವಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ದುಬೈಗೆ ಪ್ರಯಾಣಿಸಬೇಕಾದ ನಿಮಿತ್ತ ಸಲ್ಮಾನ್​ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇಮಿಗ್ರೇಷನ್​ ಪ್ರಕ್ರಿಯೆ ನಡೆಯುತ್ತಿದ್ದ ವೇಳೆಯಲ್ಲಿ ಅಲ್ಲಿದ್ದ ಅಧಿಕಾರಿಯೊಬ್ಬರು ಸಲ್ಮಾನ್​ ಜೊತೆ ಕನ್ನಡದಲ್ಲಿ ಮಾತನಾಡೋಕೆ ಆರಂಭಿಸಿದ್ದರು.

ಇದಕ್ಕೆ ಸಲ್ಮಾನ್​ ನನಗೆ ಕನ್ನಡ ಬರೋದಿಲ್ಲ ಎಂದು ಹೇಳಿದ್ದಾರೆ. ಆಗ ಆ ಅಧಿಕಾರಿ ಬೆಂಗಳೂರಿನವರೇ ಆಗಿ ಕನ್ನಡ ಬರೋದಿಲ್ಲ ಅಂದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದರು. ಬೆಂಗಳೂರಿನಲ್ಲಿ ಜನಿಸಿದ್ದೇನೆ ಎಂದ ಮಾತ್ರಕ್ಕೆ ಕನ್ನಡ ಬರಲೇಬೇಕು ಅಂತಾ ಕಡ್ಡಾಯ ನಿಯಮವಿದ್ಯಾ..? ನಾನು ಸೌದಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ನನಗೆ ಹಿಂದಿ ಬರುತ್ತೆ ಅದು ಸಾಕಲ್ವಾ..? ಪ್ರಧಾನಿ ಮೋದಿಗೇನು ಕನ್ನಡ ಬರುತ್ತದೆಯೇ ..? ಎಂದು ಪ್ರಶ್ನೆ ಮಾಡಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ‘

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಅನೇಕರು ವಿಮಾನ ನಿಲ್ದಾಣದ ಅಧಿಕಾರಿಯ ಕನ್ನಡ ಪ್ರೀತಿಗೆ ಸಲಾಂ ಎಂದಿದ್ದು ಕನ್ನಡ ಕಲಿಯುವ ಯೋಗ್ಯತೆ ನಿಮಗಿಲ್ಲ ಬಿಡಿ ಅಂತಾ ಸಲ್ಮಾನ್​ ಗೆ ಕುಟುಕಿದ್ದಾರೆ. ಇನ್ನೂ ಕೆಲವು ಕನ್ನಡಿಗರು ಕನ್ನಡ ಬರೋದಿಲ್ಲ ಅಂದಮೇಲೆ ಕರ್ನಾಟಕದಲ್ಲಿ ಏನು ಮಾಡ್ತಿದ್ದೀರಿ..? ಸೌದಿಗೆ ಹೋಗಿ ಎಂದು ಕಿಡಿಕಾರಿದ್ದಾರೆ. ಇನ್ನೂ ಕೆಲವರು ಏರ್ ​ಪೋರ್ಟ್​ನ ಆ ಅಧಿಕಾರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಹೇಳ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ