ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಈ ರಾಜ್ಯಗಳಲ್ಲಿ ಕೋಳಿ ಮಾಂಸ ಮಾರಾಟ ನಿಷೇಧ
ನವದೆಹಲಿ: ಕೊರೊನಾ ವೈರಸ್ ನ ನಡುವೆಯೇ ಕೋಳಿ ಜ್ವರ ಇದೀಗ ವ್ಯಾಪಕ ಭಯ ಹುಟ್ಟಿಸಿದೆ. ಹಿಮಾಚಲ ಪ್ರದೇಶದ ಅನೇಕ ಭಾಗದಲ್ಲಿ ಪೌಲ್ಟ್ರಿ ಕೋಳಿ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ.
ಹರ್ಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ 2 ಲಕ್ಷ ಕೋಳಿ ಮತ್ತು ವಲಸೆ ಹಕ್ಕಿಗಳು ಸಾವನ್ನಪ್ಪಿದ ನಂತರ ಅಧಿಕಾರಿಗಳು ತೀವ್ರ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಂಡಿದ್ದಾರೆ.
ಭೋಪಾಲ್ ಮೂಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ ರಾಜಸ್ತಾನದ ಜಾಲ್ವಾರ್ ಜಿಲ್ಲೆಯಿಂದ ಬಂದಿದ್ದ ಕಾಗೆಗಳ ಮೃತದೇಹದಲ್ಲಿ ಹಕ್ಕಿಜ್ವರವಿರುವುದನ್ನು ದೃಢಪಡಿಸಿದೆ. ಜಲಂಧರ್ ಮೂಲದ ಪ್ರಾದೇಶಿಕ ರೋಗನಿರ್ಣಯ ಪ್ರಯೋಗಾಲಯ ಬಾರ್ವಾಲಾ ಪ್ರದೇಶದಲ್ಲಿ ಮೃತ ಪಕ್ಷಿಗಳ ಮಾದರಿ ಸಂಗ್ರಹಿಸಿ ಪರೀಕ್ಷೆ ಕೈಗೊಂಡಿದೆ.
ಕಳೆದ ಒಂದು ತಿಂಗಳಲ್ಲಿ ಹರ್ಯಾಣದಲ್ಲಿ 4 ಲಕ್ಷ ಕೋಳಿ ಸಾವನ್ನಪ್ಪಿವೆ. ಡಿಸೆಂಬರ್ 31 ರಂದು ಮೊದಲ ಪ್ರಕರಣ ದೃಢಪಟ್ಟ ನಂತರ ಅರ್ಧ ಡಜನ್ ಜಿಲ್ಲೆಗಳಲ್ಲಿ ಪಕ್ಷಿಗಳ ಸಾವು ವರದಿಯಾಗಿದೆ. ಕೋಟಾ ಮತ್ತು ಜೋಧ್ ಪುರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಕ್ಕಿಗಳು ಮೃತಪಟ್ಟಿವೆ.